ಕರ್ನಾಟಕ

karnataka

ETV Bharat / bharat

ಅರಳಿದ ಹೂಗಳಿಂದ ಕಂಗೊಳಿಸುತ್ತಿದೆ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್​​ - ಅರಳಿದ ಹೂಗಳಿಂದ ಕಂಗೊಳಿಸುತ್ತಿರುವ ಟುಲಿಪ್ ಉದ್ಯಾನವನ

ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವಾದ ಕಾಶ್ಮೀರದ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನವು ಪೂರ್ಣವಾಗಿ ಹೂಗಳಿಂದ ಅರಳಿದೆ. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅದರ ಸೌಂದರ್ಯವನ್ನು ವೀಕ್ಷಿಸಲು ಯಾವುದೇ ಪ್ರವಾಸಿಗರು ಭೇಟಿ ನೀಡುತ್ತಿಲ್ಲ.

Kashmir's Tulip Garden
ಅರಳಿದ ಹೂಗಳಿಂದ ಕಂಗೊಳಿಸುತ್ತಿರುವ ಏಷ್ಯಾದ ಅತಿದೊಡ್ಡ ತುಲಿಪ್ ಉದ್ಯಾನವನ

By

Published : Apr 16, 2020, 7:26 PM IST

ಶ್ರೀನಗರ(ಜಮ್ಮು ಕಾಶ್ಮೀರ್​): ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ 74 ಎಕರೆ ಪ್ರದೇಶದಲ್ಲಿ ಹರಡಿರುವ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಅಥವಾ ಸಿರಾಜ್ ಬಾಗ್ ಪೂರ್ಣವಾಗಿ ಹೂಗಳಿಂದ ಕಂಗೊಳಿಸುತ್ತಿದೆ. ಆದ್ರೆ ಈ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಲ್ಲ.

ಈ ತಿಂಗಳಿನಲ್ಲಿ 13 ಲಕ್ಷಕ್ಕೂ ಹೆಚ್ಚು ಟುಲಿಪ್ ಹೂವುಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವು ಮಾರ್ಚ್ ಮೊದಲ ವಾರದಲ್ಲಿ ಸಾರ್ವಜನಿಕರಿಗಾಗಿ ತೆರೆದಿರಬೇಕಿತ್ತು. ಆದ್ರೆ ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ತೆರೆದಿಲ್ಲ. ಭಾರತದಲ್ಲಿ ಜನವರಿ 30 ರಂದು ವರದಿಯಾದ ಈ ಸಾಂಕ್ರಾಮಿಕ ರೋಗ, ಈವರೆಗೆ ದೇಶದಲ್ಲಿ 12,380 ಜನರಿಗೆ ತಗುಲಿದ್ದರೆ, 414 ಮಂದಿ ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕೃಷಿ ಇಲಾಖೆಯು ನಿರ್ವಹಿಸುತ್ತಿರುವ ಉದ್ಯಾನವನದ ಸುಂದರ ನೋಟವನ್ನು ನೋಡಲು ಯಾರೂ ಬಾರದಿರುವುದು ದಶಕದಲ್ಲಿ ಇದೇ ಮೊದಲು ಎನ್ನಲಾಗ್ತಿದೆ.

ABOUT THE AUTHOR

...view details