ಕರ್ನಾಟಕ

karnataka

ETV Bharat / bharat

ಆಂಜನೇಯನ ಜನ್ಮಸ್ಥಳ 'ಅಂಜನಾದ್ರಿ' ಎಂದು ಸಾಬೀತುಪಡಿಸಲು ಸಮಿತಿ ರಚಿಸಿದ ಟಿಟಿಡಿ

ಹನುಮಂತನು ತಿರುಮಲ ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ ಹುಟ್ಟಿದ್ದಾನೆಂದು ಸಂಶೋಧನೆ ಮಾಡಲು ಮತ್ತು ಸಾಬೀತುಪಡಿಸಲು ಪುರೋಹಿತರ ಸಮಿತಿಯನ್ನು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ರಚಿಸಿದೆ.

TTD
ಟಿಟಿಡಿ

By

Published : Dec 17, 2020, 6:58 AM IST

ತಿರುಪತಿ (ಆಂಧ್ರಪ್ರದೇಶ): ಭಗವಾನ್​ ಆಂಜನೇಯಸ್ವಾಮಿ 'ಅಂಜನಾದ್ರಿ' ಬೆಟ್ಟದಲ್ಲೇ ಜನಿಸಿದ್ದು ಎಂಬುದನ್ನು ಸಾಬೀತು ಪಡಿಸಲು ತಿರುಪತಿ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಮುಂದಾಗಿದೆ. ಇದಕ್ಕಾಗಿಯೇ ಅರ್ಚಕರನ್ನೊಳಗೊಂಡ ಸಮಿತಿಯೊಂದನ್ನು ಟಿಟಿಡಿ ರಚಿಸಿದೆ.

ಐತಿಹಾಸಿಕ ಹಾಗೂ ಧಾರ್ಮಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹನುಮಂತನು ತಿರುಮಲದಲ್ಲಿ ಜನಿಸಿದ್ದಾನೆಂದು ಸಂಶೋಧನೆ ಮಾಡಲು ಮತ್ತು ಸಾಬೀತುಪಡಿಸಲು ಪುರೋಹಿತರ ಸಮಿತಿಯನ್ನು ರಚಿಸಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದ ಭರವಸೆ; ಬಿ.ಡಿ.ಹಿರೇಮಠ ಅಮರಣಾಂತ ಉಪವಾಸ ಅಂತ್ಯ

ವಿವಿಧ ದೇವಾಲಯಗಳ ಸ್ಥಳೀಯ ಇತಿಹಾಸದಿಂದಾಗಿ ಭಗವಾನ್ ಹನುಮನ ಜನ್ಮಸ್ಥಳವನ್ನು ವಿವಿಧ ಸ್ಥಳಗಳೆಂದು ಪ್ರಚಾರ ಮಾಡಲಾಗುತ್ತಿದೆ. ತಿರುಮಲ ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಜನಿಸಿದ್ದೆಂದು ಕೆಲವು ಪುರೋಹಿತರು ನಿಸ್ಸಂದೇಹವಾಗಿ ಹೇಳುತ್ತಾರೆಂದು ರೆಡ್ಡಿ ತಿಳಿಸಿದ್ದಾರೆ.

ಜವಾಹರ್ ರೆಡ್ಡಿ ಅವರು ಸ್ಕಂದ ಪುರಾಣ, ವರಾಹ ಪುರಾಣ, ಪದ್ಮ ಪುರಾಣ, ಬ್ರಹ್ಮಾಂಡ ಪುರಾಣ, ಭವಿಷ್ಯೋತ್ತರ ಪುರಾಣ ಮತ್ತು ವೆಂಕಟಾಚಲ ಮಹಾತ್ಯಂನಲ್ಲಿ ಪರಿಣತಿ ಹೊಂದಿರುವ ಅರ್ಚಕರ ಜೊತೆ ಸಭೆ ನಡೆಸಿದ್ದು, ಆಂಜನೇಯಸ್ವಾಮಿಯ ಜನ್ಮಸ್ಥಳವನ್ನು ತುರ್ತಾಗಿ ಸಾಬೀತುಪಡಿಸುವಂತೆ ಕೇಳಿದ್ದಾರೆ.

ABOUT THE AUTHOR

...view details