ಕರ್ನಾಟಕ

karnataka

ETV Bharat / bharat

ತಿಮ್ಮಪ್ಪನ ದರ್ಶನ ಪಡೆಯಲು ಧರ್ಮದ ಹಂಗು ಬೇಕಿಲ್ಲ: ವಿವಾದ ಸ್ವರೂಪ ಪಡೆದ ಟಿಟಿಡಿ ಬೋರ್ಡ್​ ಅಧ್ಯಕ್ಷನ ಹೇಳಿಕೆ - TTD self declaration controversy

ಸ್ವ ಘೋಷಣೆ ಪತ್ರ ಇಲ್ಲದೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಯಾರಾದರೂ ಭೇಟಿ ನೀಡಬಹುದು ಎಂದು ತಿರುಮಲತಿ ತಿರುಪತಿ ದೇವಸ್ತಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತವಅದ ಹಿನ್ನೆಲೆ ಸ್ಪಷ್ಟನೆ ನಿಡಿದ್ದಾರೆ.

TTD chairman
ಟ್ರಸ್ಟ್​ ಬೋರ್ಡ್ ಅಧ್ಯಕ್ಷ

By

Published : Sep 20, 2020, 4:43 PM IST

Updated : Sep 20, 2020, 4:49 PM IST

ತಿರುಮಲ: ತಿರುಪತಿ ದೇವಾಲಯಕ್ಕೆ ಇತರ ಧರ್ಮೀಯರು ಕೂಡ ಯಾವುದೇ ಸ್ವ ಘೋಷಣೆ ಪತ್ರ ಇಲ್ಲದೆ ಆಗಮಿಸಬಹುದು ಎಂದು ತಿರುಪತಿ ದೇವಸ್ಥಾದ ಟ್ರಸ್ಟ್​ ಬೋರ್ಡ್ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರು ಹೇಳಿಕೆ ನೀಡಿದ್ದು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಮುಂಬರುವ ಬ್ರಹ್ಮೋತ್ಸವ ವ್ಯವಸ್ಥೆ ಕುರಿತು ಚರ್ಚಿಸಲು ಶುಕ್ರವಾರ ಸಂಜೆ ಟಿಟಿಡಿ ಟ್ರಸ್ಟ್ ಬೋರ್ಡ್ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ, ದೇವಾಲಯಕ್ಕೆ ಭೇಟಿ ನೀಡಲು ಸಿದ್ಧರಿರುವ ಇತರ ಧರ್ಮದ ಜನರು ಘೋಷಣೆಯನ್ನು ಸಲ್ಲಿಸುವ ಅಗತ್ಯವಿಲ್ಲ. ಅವರು ಸರ್ವಶಕ್ತನನ್ನು ಭಕ್ತಿಯಿಂದ ಭೇಟಿ ಮಾಡಬಹುದು ಎಂದು ಹೇಳಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಇತರ ಧರ್ಮದ ಜನರು ಬಾಲಾಜಿ ದರ್ಶನ ಪಡೆಯುವ ಮೊದಲು ಘೋಷಣೆ ಪತ್ರ ನೀಡುವುದು ಶಾಸನಬದ್ಧವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೆಡ್ಡಿ, ಬಾಲಾಜಿಯವರ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ತಿರುಮಲಕ್ಕೆ ಬರುತ್ತಾರೆ. ಹಬ್ಬದ ದಿನಗಳಲ್ಲಿ ಮತ್ತು ಇತರ ಶುಭ ದಿನಗಳಲ್ಲಿ 80,000 ರಿಂದ 1 ಲಕ್ಷ ಭಕ್ತರು ದೇವಾಲಯಕ್ಕೆ ಸೇರುತ್ತಾರೆ. ಅದರಲ್ಲಿ ಅನೇಕರು ಇರುತ್ತಾರೆ. ಅಂತಹ ಎಲ್ಲ ಜನರನ್ನು ನಾವು ಘೋಷಣೆ ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸೋನಿಯಾ ಗಾಂಧಿ ಮತ್ತು ದಿವಂಗತ ಮುಖ್ಯಮಂತ್ರಿ ಡಾ.ವೈ.ಎಸ್.ರಾಜಶೇಖರ್ ರೆಡ್ಡಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದಾಗ ಅಂತಹ ಯಾವುದೇ ಘೋಷಣೆ ಕೇಳಲಿಲ್ಲ.ಹಾಗೆಯೇ ಈಗಿನ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಕೂಡ ಅದನ್ನು ನೀಡಬೇಕಾಗಿಲ್ಲ ಎಂದು ಹೇಳಿದರು. ಟಿಟಿಡಿ ನಿಯಮದ ಪ್ರಕಾರ, ಹಿಂದೂಗಳು ಮಾತ್ರ ನಿಯಮ ಸಂಖ್ಯೆ 136, ನಿಯಮ ಸಂಖ್ಯೆ 137 ರ ಅಡಿಯಲ್ಲಿ ದರ್ಶನ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಭಗವಾನ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುವ ಇತರ ಧರ್ಮದ ಜನರು ತಮ್ಮ ಧಾರ್ಮಿಕ ಸ್ಥಾನಮಾನದ ಸ್ವಯಂ ಘೋಷಣೆಯನ್ನು ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

Last Updated : Sep 20, 2020, 4:49 PM IST

ABOUT THE AUTHOR

...view details