ಕರ್ನಾಟಕ

karnataka

ETV Bharat / bharat

ಪ್ರತಿಭಟನಾನಿರತ TSRTC ನೌಕರರ ಜೊತೆ ಹೆಜ್ಜೆ ಹಾಕಿದ ಸಿಪಿಐ ಹಾಗೂ ಬಿಜೆಪಿ! - ಬಿಜೆಪಿ-ಸಿಪಿಐ ಪ್ರತಿಭಟನೆ

ತತ್ವ ಸಿದ್ಧಾಂತಗಳಲ್ಲಿ ವಿಭಿನ್ನವಾಗಿರುವ ಬಿಜೆಪಿ ಹಾಗೂ ಸಿಪಿಐ ಪಕ್ಷದ ಬೆಂಬಲಿಗರು ತಮ್ಮ ತಮ್ಮ ಪಕ್ಷದ ಧ್ವಜ ಹಿಡಿದು ಪ್ರತಿಭಟನಾಕಾರರ ಜೊತೆ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

TSRTC strike

By

Published : Oct 20, 2019, 5:25 AM IST

Updated : Oct 20, 2019, 7:02 AM IST

ಹೈದರಾಬಾದ್​: ದೇಶದಲ್ಲಿ ಇದೇ ಮೊದಲ ಬಾರಿಗೆ ಹೋರಾಟವೊಂದರಲ್ಲಿ ಎಡಪಂಥೀಯ ತತ್ವದ ಸಿಪಿಐ ಹಾಗೂ ಬಲಪಂಥೀಯ ತತ್ವಗಳನ್ನು ಪಾಲಿಸುವ ಬಿಜೆಪಿ ತೆಲಂಗಾಣದಲ್ಲಿ ನಡೆಯುತ್ತಿರುವ ಟಿಎಸ್​ಆರ್​ಟಿಸಿ ನೌಕರರ ಹೋರಾಟಕ್ಕೆ ಸಾಥ್​ ನೀಡುವ ಮೂಲಕ ಆಚ್ಚರಿ ಮೂಡಿಸಿದ್ದಾರೆ.

ಟಿಎಸ್​​ಆರ್​ಟಿಸಿಯನ್ನು ಸರ್ಕಾರದ ಜೊತೆ ವಿಲೀನ, ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನಟ್ಟಿ ಶನಿವಾರ ಟಿಎಸ್​ಆರ್​ಟಿಸಿ ಹಾಗೂ ಜೆಎಸಿ ಸಂಯೋಗದಲ್ಲಿ ತೆಲಂಗಾಣ ಬಂದ್​ಗೆ ಕರೆ ನೀಡಲಾಗಿತ್ತು.

ಈ ವೇಳೆ ತತ್ವ ಸಿದ್ಧಾಂತಗಳಲ್ಲಿ ವಿಭಿನ್ನವಾಗಿರುವ ಬಿಜೆಪಿ ಹಾಗೂ ಸಿಪಿಐ ಪಕ್ಷದ ಬೆಂಬಲಿಗರು ತಮ್ಮ ತಮ್ಮ ಪಕ್ಷದ ಧ್ವಜ ಹಿಡಿದು ಪ್ರತಿಭಟನಾಕಾರರ ಜೊತೆ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಏನೇ ಆದರೂ ಪ್ರತ್ಯೇಕ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿರುವ ಬಿಜೆಪಿ ಹಾಗೂ ಸಿಪಿಐ ಬೆಂಬಲಿಗರು ನೌಕರರ ಪರ ನ್ಯಾಯಕ್ಕಾಗಿ ಒಂದುಗೂಡಿ ಹೋರಾಟ ನಡೆಸುತ್ತಿರುವುದಕ್ಕೆ ಮೆಚ್ಚಲೇಬೇಕಾಗಿದೆ.

ಇನ್ನು ಆರ್​ಟಿಸಿ ನೌಕರರು ಸರ್ಕಾರದ ವಿರುದ್ಧ ಕಳೆದ 13 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು, ತೆಲಂಗಾಣ ಸಿಎಂ ಪ್ರತಿಭಟನಾಕಾರರ ಯಾವುದೇ ಬೇಡಿಕೆಗಳಿಕೆಗೆ ಸ್ಪಂದಿಸಿಲ್ಲ. ಅದರಲ್ಲು ಬಂದ್​ಗೆ ಕರೆಕೊಟ್ಟನಂತರ ಸ್ಥಳೀಯ ಯುನಿಯನ್​ ಲೀಡರ್​ಗಳನ್ನು ಅವರ ಮನೆಗೆ ನುಗ್ಗಿ ಪೊಲೀಸರು ಬಂಧಿಸಿದ್ದಾರೆ ಎಂದು ರಾಜ್ಯ ಟಿಎಸ್​ಆರ್​ಟಿಸಿ ನೌಕರರ ಘಟಕದ ಅಧ್ಯಕ್ಷ ರಾಜಿ ರೆಡ್ಡಿ ಆರೋಪಿಸಿದ್ದಾರೆ.

Last Updated : Oct 20, 2019, 7:02 AM IST

ABOUT THE AUTHOR

...view details