ಕರ್ನಾಟಕ

karnataka

ETV Bharat / bharat

ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್​​​​... ಮಸೀದಿಗಾಗಿ 5 ಎಕರೆ ಭೂಮಿ ಮಂಜೂರು!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್​ ನಿರ್ಮಾಣಗೊಳ್ಳಲಿದ್ದು, ಸ್ವತಂತ್ರವಾಗಿ ಅದು ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಸಂಸತ್​ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

By

Published : Feb 5, 2020, 1:14 PM IST

Ram Temple in Ayodhya
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಸುಪ್ರೀಂಕೋರ್ಟ್​​​ ಆದೇಶ ನೀಡಿದ್ದು, ಅದರ ಪ್ರಕಾರವೇ ಇದೀಗ ಕೇಂದ್ರ ಸರ್ಕಾರ 15 ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ ರಚನೆಯಾಗಿದೆ.

ರಾಮಮಂದಿರ ನಿರ್ಮಾಣಕ್ಕಾಗಿ 15 ಸದಸ್ಯರ ಟ್ರಸ್ಟ್

ಇದೇ ವಿಷಯವಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು, ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆ ಟ್ರಸ್ಟ್​ ರಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಪ್ರೀಂಕೋರ್ಟ್​ ನೀಡಿರುವ ಆದೇಶದಂತೆ ನಾವು ಟ್ರಸ್ಟ್​ ರಚಿಸಲಿದ್ದು, ಅದಕ್ಕಾಗಿ 'ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದರು.

ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಿತ ಭೂಮಿಯನ್ನ ರಾಮ್​ಲಲ್ಲಾಗೆ ನೀಡಿ ಕಳೆದ ವರ್ಷ ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಇದೇ ವೇಳೆ, ಸುನ್ನಿ ವಕ್ಫ್​ ಬೋರ್ಡ್​ಗೆ ಉತ್ತರ ಪ್ರದೇಶದ ಪ್ರಮುಖ ಜಾಗದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಇದೀಗ ಸುನ್ನಿ ವಕ್ಪ್​ ಮಂಡಳಿಗೆ ಉತ್ತರಪ್ರದೇಶ ಸರ್ಕಾರ ಐದು ಎಕರೆ ಜಮೀನು ನೀಡಿ ಆದೇಶ ಹೊರಹೊರಡಿಸಿದೆ.

ಪ್ರಧಾನಿ ಅಭಿನಂದಿಸಿದ ಶಾ:ಈ ನಡುವೆ, ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ರಚನೆ ಮಾಡಲಾಗಿರುವ 15 ಸದಸ್ಯರ ಸಮಿತಿಯಲ್ಲಿ ದಲಿತ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದಾಗಿ ಅವರು ಹೇಳಿದ್ದಾರೆ. ಸಾಮಾಜಿಕ ಸೌಹಾರ್ದತೆ ಕಾಪಾಡಲು ಪ್ರಧಾನಿ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ನಾನು ಪಿಎಂ ಅವರನ್ನ ಅಭಿನಂದಿಸುತ್ತೇನೆ ಎಂದು ಅವರು ಟ್ವೀಟ್​ ಮಾಡಿದ್ದಾರೆ

ABOUT THE AUTHOR

...view details