ಕರ್ನಾಟಕ

karnataka

ETV Bharat / bharat

ಚುನಾವಣಾ ಹಿನ್ನಡೆಯಿಂದ ಪಾರಾಗಲು ಟ್ರಂಪಿಸಂ: ಅಮೆರಿಕ ಕಾಡುತ್ತಿರುವ ರಾಜಕೀಯ ಪ್ರಕ್ಷುಬ್ಧತೆ - Trump

ಟ್ರಂಪಿಸಂ ಎಂದು ನಮಗೆ ತಿಳಿದಿರುವ ವಿಷಯವೆಂದರೆ ಆಳವಾದ ಸಂಪ್ರದಾಯವಾದಿ ನಿಲುವುಗಳು, ನಂಬಿಕೆಗಳು ಮತ್ತು ವಿಚಾರಗಳು, ಇತರ ವಿಷಯಗಳು, ಜನಾಂಗ, ಲಿಂಗ, ವರ್ಗ ಮತ್ತು ವೈಜ್ಞಾನಿಕ ಉದ್ವೇಗವಾಗಿದೆ. ಈ ನವಸಂಪ್ರಾದಾಯವಾದಿ ಧೋರಣೆ ವ್ಯವಸ್ಥೆಯು ಖಂಡಿತವಾಗಿಯೂ ಟ್ರಂಪ್ ಅವರ ಸೃಷ್ಟಿಯಲ್ಲ, ಆದರೆ ಮುಖ್ಯವಾಹಿನಿಯ ರಾಜಕೀಯದಲ್ಲಿ ಈ ವಿಚಾರಗಳ ಒಳನುಸುಳವಿಕೆಗೆ ಅವರು ಸೇತುವೆಯಾಗಿದ್ದಾರೆ.

Trump
ಟ್ರಂಪ್

By

Published : Nov 11, 2020, 9:47 AM IST

ಅಮೆರಿಕದ 46 ನೇ ಅಧ್ಯಕ್ಷರಾಗಿ ಬೈಡನ್ ಆಯ್ಕೆಯಾದ ನಂತರ ಉತ್ಸಾಹ ಇಮ್ಮಡಿ ಆಗಿದೆ ಎಂದು ಬಾಸವಾಗುತ್ತಿದೆ. ವಾಸ್ತವವಾಗಿ, ಅಮೆರಿಕದಲ್ಲಿ ನಡೆದ 59 ನೇ ಅಧ್ಯಕ್ಷೀಯ ಚುನಾವಣೆಯು ಅದರ ಯಶಸ್ವಿಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. 1992ರ ನಂತರ ಹಾಲಿ ಅಧ್ಯಕ್ಷರೊಬ್ಬರು ಎರಡನೇ ಅವಧಿಗೆ ಆಯ್ಕೆಯಾಗುವಲ್ಲಿ ವಿಫಲವಾದ ಮೊದಲ ಚುನಾವಣೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದು. 2008 ರಿಂದ ಬರಾಕ್ ಒಬಾಮ ಅವರ 69.5 ಮಿಲಿಯನ್ ಮತಗಳ ದಾಖಲೆಯನ್ನು ಮೀರಿಸಿ, 75 ದಶಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದ ಬೈಡನ್​ ಅವರು ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದರು. ಚುನಾವಣೆಯಲ್ಲಿ ದಾಖಲೆಯ ಸಂಖ್ಯೆಯ ಮತಪತ್ರಗಳು ಮುಂಚಿತವಾಗಿ ಇಮೇಲ್ ಮೂಲಕ ದಾಖಲಾಗಿದ್ದವು. ಏಕೆಂದರೆ ಅನೇಕ ರಾಜ್ಯಗಳು ಇಮೇಲ್ ಮೂಲಕ ಮತದಾನ ಮಾಡಲು ಅವಕಾಶ ನೀಡಿತ್ತು ಮತ್ತು ಕೋವಿಡ್ ಸಂದರ್ಭದಲ್ಲಿ ಹೇರಿದ್ದ ನಿರ್ಬಂಧಗಳನ್ನು ಅನೇಕ ರಾಜ್ಯಗಳು ಸಡಿಲಿಸಿವೆ. ಇದರ ಫಲಿತಾಂಶ ಹೆಚ್ಚಿನ ಸಂಖ್ಯೆಯ ಇಮೇಲ್ ಮತಗಳಿಂದಾಗಿ, ಕೆಲವು ಏರಿಳಿತ ಫಲಿತಾಂಶ ವಿರುವ ರಾಜ್ಯಗಳಲ್ಲಿ ಮತ ಎಣಿಕೆ ಮತ್ತು ವರದಿ ಪಡೆಯುವಲ್ಲಿ ವಿಳಂಬವಾಯಿತು.

ಪ್ರಮುಖ ಸುದ್ದಿವಾಹಿನಿಗಳು ಏಣಿಕೆ ಆರಂಭಗೊಂಡ ನಾಲ್ಕು ದಿನಗಳ ನಂತರ, ನವೆಂಬರ್ 7, 2020 ರಂದು ಫಲಿತಾಂಶ ಪ್ರಕಟಿಸಿತು. ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಕಪ್ಪುವರ್ಣದ ಮಹಿಳೆ, ಅಂತಹ ದೊಡ್ಡ ಸಾಧನೆಗಳ ಹೊರತಾಗಿಯೂ, 59 ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಜನಾದೇಶವು ಮತದಾರರಿಂದ ನಿರೀಕ್ಷಿಸಲ್ಪಟ್ಟಷ್ಟು ನಿರ್ಣಾಯಕ ಫಲಿತಾಂಶವಾಗಿರಲಿಲ್ಲ. ಹಾಲಿ ಅಧ್ಯಕ್ಷ ಟ್ರಂಪ್ 70 ದಶಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಸ್ಮರಿಸುವುದು ಬಹಳ ಬೇಸರದ ಸಂಗತಿಯಾಗಿದೆ. ಅವರು ಪಡೆದ ಮತಗಳು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪಡೆದ ಜನಪ್ರಿಯ ಮತಗಳಿಗಿಂತ ಹೆಚ್ಚಿಲ್ಲ. ವಾಸ್ತವವಾಗಿ, ಟ್ರಂಪ್ ತಮ್ಮ ನೀತಿಗೆ ಪೂರಕ ವಾಗಿ ಬೆಂಬಲವನ್ನು ವಿಸ್ತರಿಸಿಕೊಂಡರು.

ಈ ಬಾರಿ ನಡೆದ ಚುನಾವಣೆ 2016 ಮತ್ತು 2020 ರ ನಡುವೆ ನಡೆದ ಮತದಾನದ ಮಾದರಿಯನ್ನು ಪ್ರತಿಫಲಿಸುತ್ತದೆ. 2016 ರ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಟ್ರಂಪ್ ಅವರು 62, 984, 828 ಮತಗಳನ್ನು ಪಡೆದರು, ಇದು ಒಟ್ಟು ನಡೆದ ಮತದಾನದಲ್ಲಿ ಶೇ 46 ಆಗಿದೆ. 2020 ರಲ್ಲಿ ಟ್ರಂಪ್ ಪರವಾಗಿ ಚಲಾವಣೆಗೊಂಡ ಮತಗಳು 71,098,559 ಕ್ಕೆ ಏರಿತು, ಇದು ಒಟ್ಟು ನಡೆದ ಮತದಾನದಲ್ಲಿ ಸುಮಾರು ಶೇ 48. (ಲೇಖನ ಬರೆಯುವ ಸಮಯದಲ್ಲಿ ಸರಿಸುಮಾರು ಶೇ 93 ಮತಗಳನ್ನು ಎಣಿಸಲಾಗಿದೆ.) 59 ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಜೆ ಟ್ರಂಪ್ ಅವರನ್ನು ಚುನಾವಣಾ ಸೋಲಿನ ಹೊರತಾಗಿಯೂ, ಅವರ ಟ್ರಂಪಿಸಂಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ಸ್ಷಷ್ಟ.

2020 ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಅಭೂತಪೂರ್ವ ವಿಜಯದ ನಡುವೆಯೂ ಸೆನೆಟ್ ಚುನಾವಣೆಯಲ್ಲಿ ಡೆಮೋಕ್ರಾಟ್ ಪಕ್ಷವು ಈಗಿರುವ ಸ್ಥಿತಿಯನ್ನು ಒತ್ತಿ ಹೇಳುತ್ತಿದೆ. ರಿಪಬ್ಲಿಕನ್ ಪಕ್ಷವು 18 ಸ್ಥಾನಗಳನ್ನು ಗೆದ್ದಿದೆ, ಹೀಗಾಗಿ ಆ ಪಕ್ಷವು ಯುಎಸ್ ಸೆನೆಟ್​​​​ನಲ್ಲಿ 48 ಸ್ಥಾನಗಳನ್ನು ಹೊಂದಿದೆ. ಡೆಮಾಕ್ರಟಿಕ್ ಪಕ್ಷವು 13 ಸ್ಥಾನಗಳನ್ನು ಗೆದ್ದು ತನ್ನ ಸಂಖ್ಯೆಯನ್ನು 46 ಕ್ಕೆ ಏರಿಸಿಕೊಂಡಿದೆ. ಎರಡು ಸ್ಥಾನಗಳನ್ನು ಸ್ವತಂತ್ರರು ಹೊಂದಿದ್ದಾರೆ. ಜಾರ್ಜಿಯಾದಲ್ಲಿ ನಡೆಯಲಿರುವ ಸೆನಟ್ ನ ಎರಡು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಯು ಯುಎಸ್ ಸೆನೆಟ್​​​ನ ಭವಿಷ್ಯವನ್ನು ನಿರ್ಧರಿಸಲಿದೆ.

ಸೆನೆಟ್ ನಲ್ಲಿ ಬಹುಮತ ಹೊಂದಲು 51 ಸ್ಥಾನಗಳು ಬೇಕಾಗುತ್ತವೆ, ಅಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷವು ಒಟ್ಟು ಮತಗಳಲ್ಲಿ ಶೇ 50 ಅಥವಾ ಅದಕ್ಕಿಂತ ಹೆಚ್ಚಿನದನ್ನು ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಅಧ್ಯಕ್ಷೀಯ ಚುನಾವಣೆ 2020 ರ ನಿಗದಿತ ದಿನಾಂಕವಾದ ನವೆಂಬರ್ 3, 2020 ರಂದು ವೈಯಕ್ತಿಕ ಮತದಾರರ ಮತದಾನದಲ್ಲಿ ಉತ್ಸಾಹಿಗಳಿಗಾಗಿ ಮತದಾನ ಮಾಡಲು ಟ್ರಂಪ್ ಅವರು ನಡೆಸಿದ ಆಕ್ರಮಣಾಕಾರಿ ಚುನಾವಣೆ ಪ್ರಚಾರಕ್ಕೆ ಸಲ್ಲುತ್ತದೆ ಎಂದು ಮಾಧ್ಯಮ ವಿಶ್ಲೇಷಕರು ಮತ್ತು ಮತದಾರರು ವಿಶ್ಲೇಷಿಸುತ್ತಾರೆ. ಚುನಾವಣೆಯಲ್ಲಿ ಟ್ರಂಪ್‌ ಅವರು ಬೆಂಬಲಿಗರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಲು ಮುಖ್ಯವಾಗಿ ಟ್ರಂಪ್ ಅವರು ಯುಎಸ್ ರಾಷ್ಟ್ರವಾಗಿ ಪ್ರಾರಂಭವಾದಾಗಿನಿಂದ ಯುಎಸ್ ರಾಜಕೀಯದ ಒಂದು ಭಾಗವಾಗಿರುವ ಭೂಗತ ಸಿದ್ಧಾಂತದೊಂದಿಗಿನ ಆವರ ಸಂಪರ್ಕದ ನೇರ ಪರಿಣಾಮವಾಗಿದೆ.

ಟ್ರಂಪಿಸಂ ಎಂದು ನಮಗೆ ತಿಳಿದಿರುವ ವಿಷಯವೆಂದರೆ ಆಳವಾದ ಸಂಪ್ರದಾಯವಾದಿ ನಿಲುವುಗಳು, ನಂಬಿಕೆಗಳು ಮತ್ತು ವಿಚಾರಗಳು, ಇತರ ವಿಷಯಗಳು, ಜನಾಂಗ, ಲಿಂಗ, ವರ್ಗ ಮತ್ತು ವೈಜ್ಞಾನಿಕ ಉದ್ವೇಗವಾಗಿದೆ. ಈ ನವಸಂಪ್ರಾದಾಯವಾದಿ ಧೋರಣೆ ವ್ಯವಸ್ಥೆಯು ಖಂಡಿತವಾಗಿಯೂ ಟ್ರಂಪ್ ಅವರ ಸೃಷ್ಟಿಯಲ್ಲ, ಆದರೆ, ಮುಖ್ಯವಾಹಿನಿಯ ರಾಜಕೀಯದಲ್ಲಿ ಈ ವಿಚಾರಗಳ ಒಳನುಸುಳವಿಕೆಗೆ ಅವರು ಸೇತುವೆಯಾಗಿದ್ದಾರೆ. ನವ - ಸಂಪ್ರದಾಯವಾದಿ ರಾಜಕಾರಣದ ಚಿತ್ರಣವು ಸಂಘಟನೆಗಳು ಮತ್ತು ಗುಂಪುಗಳ ಸಮೂಹದಿಂದ ರೂಪುಗೊಂಡಿದೆ. ಅವುಗಳ ನಡುವೆ ವ್ಯವಸ್ಥಿತ ಸಂಬಂಧಗಳನ್ನು ಸ್ಥಾಪಿಸುವುದು ಕಷ್ಟಕರವಾಗಿರುತ್ತದೆ. ಅವು ವ್ಯಾಪಕವಾಗಿ ವಿಭಿನ್ನ ಸಾಂಸ್ಥಿಕ ತತ್ವಗಳಿಗೆ ಬದ್ಧವಾಗಿರುತ್ತವೆ ಮತ್ತು ಮೇಲೆ ತಿಳಿಸಲಾದ ಒಳಸುಳಿಯ ಸಿದ್ಧಾಂತಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಸಂಘಟನೆಗಳ ಈ ಸಮೂಹದ ಒಂದು ತುದಿಯಲ್ಲಿ ಯಾವುದೇ ಮಾನ್ಯತೆ ಪಡೆದ ನಾಯಕ, ರಾಜಕೀಯ ಕೇಂದ್ರ ಅಥವಾ ರಚನಾತ್ಮಕ ಸಂಘಟನೆಗಳನ್ನೊಳಗೊಂಡ ಅಕಾರ ರಹಿತ ಗುಂಪುಗಳಾಗಿವೆ. ಅಂತಹ ಗುಂಪುಗಳಿಗೆ ಕ್ವಾನಾನ್ ಒಂದು ವಿಶಿಷ್ಟ ಉದಾಹರಣೆಯಾಗಿದೆ, ಇನ್ನೊಂದು ತೀವ್ರವಾದ ಗುಂಪುಗಳೆಂದರೆ ರಹಸ್ಯವಾದ, ಹೆಚ್ಚು ಶಿಸ್ತುಬದ್ಧ ಮತ್ತು ಕ್ರಮಾನುಗತವಾಗಿ ಸಂಘಟಿತವಾದ ಬಿಳಿ ಪ್ರಾಬಲ್ಯವಾದಿಗಳು ಮತ್ತು ಬಲಪಂಥೀಯ ಮಿಲಿಷಿಯಾಗಳು ಮತ್ತು ಅಂತಿಮವಾಗಿ ರೇಡಿಯೊ ಟಾಕ್ ಶೋಗಳು, ಕೇಬಲ್ ಸುದ್ದಿಗಳು ಮತ್ತು ಬ್ರೀಟ್‌ಬಾರ್ಟ್ ನ್ಯೂಸ್‌ನಂತಹ ಬಲ-ಧೋರಣೆಹೊಂದಿರುವ ವೆಬ್‌ಸೈಟ್‌ಗಳಿವೆ, ಇದು ಆಲ್ಟ್-ರೈಟ್‌ನ ವೇದಿಕೆಯಾಗಿದೆ. ಈ ಗುಪ್ತಗಾಮಿನಿ ಸಿದ್ಧಾಂತ ಮತ್ತು ಅದಕ್ಕೆ ಸಂಬಂಧಿಸಿದ ಗುಂಪುಗಳು, ರಿಪಬ್ಲಿಕನ್ ಪಕ್ಷಕ್ಕೆ ಗಣನೀಯ ಪ್ರಮಾಣದ ಮತ ನೀಡಿದರೂ ಈ ಗುಂಪು ಪಕ್ಷದ ಒಂದು ಭಾಗವಾಗಿರಲಿಲ್ಲ ಅಥವಾ ಆ ಪಕ್ಷದ ನಿಯಂತ್ರಣದಲ್ಲಿಲ್ಲ.

ಬಹಳ ಹಳೆಯ ಪಕ್ಷದೊಂದಿಗೆ ಆಲ್ಟ್-ರೈಟ್ ಅನ್ನು ಜೋಡಿಸುವುದು ಸಂಪೂರ್ಣವಾಗಿ ಟ್ರಂಪ್ ಮತ್ತು ಅವರ ಭಕ್ತರ ಕೈವಾಡವಾಗಿದೆ. ರಿಪಬ್ಲಿಕನ್ ಪಕ್ಷದ ಮೇಲೆ ಟ್ರಂಪ್ ಹೊಂದಿರುವ ಬಿಗಿ ಹಿಡಿತದ ಪುರಾವೆ ಇಲ್ಲಿದೆ. ಚುನಾವಣಾ ಸೋಲಿನ ಹೊರತಾಗಿಯೂ ಅದು ಅನುಸರಿಸುತ್ತದೆ. ಟ್ರಂಪ್ ಮತ್ತು ಅವರ ವಿಶ್ವಾಸಾರ್ಹ ಅನುಯಾಯಿಗಳು ಪಕ್ಷದ ತಳದಲ್ಲಿ ದೃಡ ಊರಿದ್ದಾರೆ ಮತ್ತು ಡೆಮಾಕ್ರಟ್‌ಗಳು ಮತ್ತು ಇತರ ಗ್ರಹಿಸಿದ ಶತ್ರುಗಳೊಂದಿಗೆ ಘರ್ಷಣೆಯನ್ನು ಮುಂದುವರೆಸುವುದು ಅವರ ಉದ್ದೇಶವಾಗಿದ. ಸಂಕ್ಷಿಪ್ತವಾಗಿ ಹೇಳುವುದಾದರೆ, ಟ್ರಂಪ್ ಅಧ್ಯಕ್ಷತೆಯ ವಿಶಿಷ್ಟ ಲಕ್ಷಣವಾದ ವಿಭಜಕ ರಾಜಕಾರಣವು ಅವರ ಚುನಾವಣಾ ಸೋಲಿನ ನಂತರವೂ ಮುಂದುವರಿಯಲಿದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ರಾಜಕೀಯತೆಯ ದುರ್ಬಲತೆಯ ಯಾವುದೇ ವಿಶ್ಲೇಷಣೆಯು ಆ ದೇಶ ರಾಜಕೀಯ ಪಕ್ಷಗಳಲ್ಲಿನ ಗಮನಾರ್ಹ ರೂಪಾಂತರಗಳಿಗೆ ಕಾರಣವಾಗದೆ ಅಪೂರ್ಣವಾಗಿರುತ್ತದೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳೆರಡರಲ್ಲೂ ಗಮನಾರ್ಹವಾದ ದೋಷ ರೇಖೆಗಳು ಗೋಚರಿಸಿದೆ.

2016 ರಲ್ಲಿ ನಡೆದ 58 ನೇ ಅಧ್ಯಕ್ಷೀಯ ಚುನಾವಣೆಯು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಸಂಘಟನೆಯು ತೀವ್ರಗಾಮಿ ನಿಲುವಿನಲ್ಲಿ ಕೊಚ್ಚಿಹೋಗುವ ಅಪಾಯವನ್ನೆದುರಿಸುತ್ತಿವೆ. ಡೆಮಾಕ್ರಟಿಕ್ ಪಕ್ಷವು ಎಡ ಪಂಥೀಯರಿಂದ ಹೆಚ್ಚುತ್ತಿರುವ ಸವಾಲನ್ನು ಎದುರಿಸುತ್ತಿದೆ. ಅದು ಸಾಮಾಜಿಕ - ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳ ಹಿಮನದಿಯ ವೇಗದಲ್ಲಿ ಹೆಚ್ಚು ಅಸಹನೆಯಿಂದ ಬೆಳೆಯುತ್ತಿದೆ. ಬರ್ನಿ ಸ್ಯಾಂಡರ್ಸ್ ಮತ್ತು ದಿ ಸ್ಕ್ವಾಡ್ ಡೆಮೋಕ್ರಾಟ್ಸ್ (2018 ರ ಆಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿ ಆಯ್ಕೆಯಾದ ನಾಲ್ಕು ಮಹಿಳೆಯರ ಗುಂಪು, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ - ಕಾರ್ಟೆಜ್, ಮಿನ್ನೇಸೋಟದ ಇಲ್ಹಾನ್ ಒಮರ್, ಮೆಸಾಚೂಸೆಟ್ಸ್‌ನ ಅಯನ್ನಾ ಪ್ರೆಸ್ಲೆ ಮತ್ತು ಮಿಚಿಗನ್‌ನ ರಶೀದಾ ತಲೈಬ್ ಅವರನ್ನೊಳಗೊಂಡಿದೆ) ಡೆಮಾಕ್ರಟಿಕ್ ಪಕ್ಷದ ಎಡಪಂಥೀಯರ ಆತಂಕಗಳು ಮತ್ತು ಆಕಾಂಕ್ಷೆಗಳನ್ನು ನಿರೂಪಿಸುತ್ತಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಈಗಾಗಲೇ ಈ ಗುಂಪು ಎರಡು ವಿಫಲ ಪ್ರಯತ್ನಗಳನ್ನು ಮಾಡಿದೆ. ಇದೇ ಗುಂಪು ಪೊಲೀಸ್, ವೈದ್ಯಕೀಯ ಮತ್ತು ಶೈಕ್ಷಣಿಕ ಸುಧಾರಣೆಗಳ ಚಳವಳಿಯ ಹಿಂದಿನ ಪ್ರೇರಕ ಶಕ್ತಿಯಾಗಿವೆ ಮತ್ತು ಸಮಾನ ಮತ್ತು ಕನಿಷ್ಠ ವೇತನಕ್ಕೆ ಬೆಂಬಲ ನೀಡುತ್ತಿವೆ. ಟ್ರಂಪ್ ಮತ್ತು ಸ್ಟೀಫನ್ ಕೆವಿನ್ ಬ್ಯಾನನ್ ಅವರ ನೇತೃತ್ವದಲ್ಲಿ ರಿಪಬ್ಲಿಕನ್ ಪಕ್ಷದ ಸಂಘಟನೆಯು ಈಗಾಗಲೇ ಈ ಸವಾಲಿನಿಂದ ಹೊರಬಂದಿದೆ.

ಅಮೆರಿಕ ಸ್ಥಾಪಕ ಪಿತಾಮಹರು ಜಗತ್ತಿನ ಸ್ವಾತಂತ್ರ್ಯದ ದಾರಿದೀಪವಾಗಿ, ಬೆಟ್ಟದ ಮೇಲೆ ಹೊಳೆಯುವ ನಗರವಾಗಿ ದೃಶ್ಯೀಕರಿಸಿದ್ದಾರೆ. ಪ್ರಸ್ತುತ ಪ್ರಕ್ಷುಬ್ಧ ಕಾಲದಲ್ಲಿ ಅದನ್ನು ಗೆಳೆತನದ ದ್ಯೋತಕವಾಗಿ ಬಳಸಬಹುದು. ಇದು ನಮ್ಮ ಕಾಳಜಿಯಾಗಬಹುದೇ ? ಚೀನಾದ ಸಂಭಾವ್ಯ ಹೈಪರ್‌ಪವರ್‌ನ ಹಿನ್ನೆಲೆಯಲ್ಲಿ ಬಹುಪಕ್ಷೀಯ ಸಂಸ್ಥೆಗಳ ನಾಯಕತ್ವವನ್ನು ಮರಳಿ ಪಡೆಯುವ ಸಾಮರ್ಥ್ಯದ ಮೇಲೆ ವಿಭಜಿತಗೊಂಡಿರುವ ಅಮೆರಿಕದ ಪ್ರಭಾವವನ್ನು ಒಬ್ಬರು ಗ್ರಹಿಸಬೇಕು.

ಕುಮಾರ್ ಸಂಜಯ್ ಸಿಂಗ್ , ಸಹಾಯಕ ಪ್ರಾಧ್ಯಾಪಕ, ಸ್ವಾಮಿ ಶ್ರದ್ಧಾನಂದ ಕಾಲೇಜು, ದೆಹಲಿ ವಿಶ್ವವಿದ್ಯಾಲಯ.

ABOUT THE AUTHOR

...view details