ನ್ಯೂಯಾರ್ಕ್: ಮಲೇರಿಯಾ ರೋಗನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಒಟ್ಟು 24 ಡ್ರಗ್ಸ್ ಮೇಲಿನ ನಿಷೇಧವನ್ನು ಭಾರತ ಇತ್ತೀಚೆಗೆ ತೆರವುಗೊಳಿಸಿತ್ತು. ಅಮೆರಿಕ ಸೇರಿದಂತೆ ಅವಶ್ಯವಿರುವ ಜಗತ್ತಿನ ಇತರೆ ದೇಶಗಳಿಗೆ ಭಾರತ ಈ ಔಷಧಗಳ ರಫ್ತು ಕಾರ್ಯ ಮಾಡುತ್ತಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿಗೆ ನಮೋ ನಿರ್ಧಾರ... ಹಾಡಿ ಹೊಗಳಿದ ಟ್ರಂಪ್!
ಕೊರೊನಾ ವೈರಸ್ನಿಂದ ಒದ್ದಾಡುತ್ತಿರುವ ಅಮೆರಿಕ ಈ ಔಷಧಿ ಪಡೆದುಕೊಳ್ಳುತ್ತಿದ್ದಂತೆ ಪ್ರಧಾನಿ ಮೋದಿಯವರನ್ನು ಟ್ರಂಪ್ ಮತ್ತೊಮ್ಮೆ ಹಾಡಿಹೊಗಳಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸ್ನೇಹಿತರ ನಡುವಿನ ಸಹಕಾರ ಅಗತ್ಯ. ಹೈಡ್ರಾಕ್ಸಿಕ್ಲೋರೋಕ್ವಿನ್ ಕಳುಹಿಸಿಕೊಟ್ಟ ಭಾರತಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯ ನಾಯಕತ್ವ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ ಮಾತ್ರವಲ್ಲ, ಇಡೀ ಮಾನವತೆಗೆ ನೆರವಾಗುತ್ತಿದೆ ಎಂದು ಟ್ರಂಪ್ ಟ್ವೀಟ್ ಮೂಲಕ ಗುಣಗಾನ ಮಾಡಿದ್ದಾರೆ.
ಅವಶ್ಯ ಔಷಧಿಗಳ ಮೇಲೆ ಹೇರಿದ್ದ ರಫ್ತು ನಿಷೇಧವನ್ನು ಭಾರತ ಹಿಂಪಡೆದುಕೊಳ್ತಿದ್ದಂತೆ 'ಮೋದಿ ಈಸ್ ಗ್ರೇಟ್' ಮತ್ತು ಆತ್ಮೀಯ ಗೆಳೆಯ' ಎಂದು ಟ್ರಂಪ್ ಹೇಳಿದ್ದರು.