ಕರ್ನಾಟಕ

karnataka

ಟ್ರಂಪ್, ಪೊಂಪೆ, ಐಸಿಸ್​​ ಮಾತ್ರ ಸುಲೇಮಾನಿ ಹತ್ಯೆ ಸಂಭ್ರಮಿಸುತ್ತಿವೆ: ಇರಾನ್ ಕೆಂಡ

By

Published : Jan 15, 2020, 2:45 PM IST

ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆ ವಿರೋಧಿಸಿ ಲಕ್ಷಾಂತರ ಮಂದಿ ಬೀದಿಗಿಳಿದಿದ್ದರು. ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ, ಈ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಿದೆ ಎಂದು ಇರಾನ್ ವಿದೇಶಾಂಗ ಸಚಿವ ಜಾವದ್ ಝರೀಫ್ ತಮ್ಮ ಕೋಪವನ್ನ ಹೊರ ಹಾಕಿದ್ದಾರೆ.

celebrating Soleimani death,ಇರಾನ್ ವಿದೇಶಾಂಗ ಸಚಿವ ಜಾವದ್ ಝರೀಫ್
ಇರಾನ್ ವಿದೇಶಾಂಗ ಸಚಿವ ಜಾವದ್ ಝರೀಫ್

ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಮತ್ತು ಐಸಿಸ್​​ ನವರು ಮಾತ್ರ ಇರಾನ್ ಕದ್ಸ್‌ ಫೋರ್ಸ್ ಮುಖ್ಯಸ್ಥ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯನ್ನ ಸಂಭ್ರಮಿಸುತ್ತಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಜಾವದ್ ಝರೀಫ್ ಕೆಂಡಕಾರಿದ್ದಾರೆ

ನವದೆಹಲಿಯಲ್ಲಿ ಮಾತನಾಡಿದ ಅವರು, ಅಮೆರಿಕ ಸ್ಥಳೀಯ ದೃಷ್ಟಿಕೋನದಲ್ಲಿ ನೋಡದೇ, ಅವರ ದೃಷ್ಟಿಕೋನದಲ್ಲಿ ಮಾತ್ರ ಯೋಚನೆ ಮಾಡುತ್ತದೆ. ಸುಲೇಮಾನಿ ಹತ್ಯೆ ಅವರ ನಿರ್ಲಕ್ಷ್ಯ ಮತ್ತು ಆಕ್ರಮಣಕಾರಿ ನೀತಿಯನ್ನ ತೋರಿಸುತ್ತದೆ ಎಂದಿದ್ದಾರೆ.

ಸುಲೇಮಾನಿ ಎಂದರೆ ಅಮೆರಿಕಕ್ಕೆ ಆಗುತ್ತಿರಲಿಲ್ಲ. ದಾಯಿಶ್ ಸಂಘಟನೆ ವಿರುದ್ಧ ಹೋರಾಡುತ್ತಿದ್ದ ಏಕೈಕ ವ್ಯಕ್ತಿ ಸುಲೇಮಾನಿ. ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ ನೀವೇ ನೋಡಿ ಸುಲೇಮಾನಿ ಹತ್ಯೆಯನ್ನ ಸಂಭ್ರಮಿಸುತ್ತಿರುವವರು ಸಾಮಾನ್ಯರಲ್ಲ, ಟ್ರಂಪ್, ಪೊಂಪೆ ಮತ್ತು ದಾಯಿಶ್​ಗಳು(ISIS) ಎಂದಿದ್ದಾರೆ.

ಸುಲೇಮಾನಿ ಹತ್ಯೆ ವಿರೋಧಿಸಿ 10 ಲಕ್ಷಕ್ಕೂ ಅಧಿಕ ಜನ ಬೀದಿಗಿಳಿದಿದ್ದರು. ಟೆಹರಾನ್​ ಮಾತ್ರವಲ್ಲ, ಇರಾನ್, ಇರಾಕ್, ಭಾರತ ಸೇರಿದಂತೆ ರಷ್ಯಾದಲ್ಲೂ ಜನ ಪ್ರತಿಭಟಿಸಿದ್ದರು. ಅಮೆರಿಕ ನಮ್ಮ ಪ್ರದೇಶದ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗಿದೆ, ಅವರು ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details