ಕರ್ನಾಟಕ

karnataka

ETV Bharat / bharat

ಟ್ರಂಪ್​ ಭಾರತ ಭೇಟಿ ಮತ್ತು ದೂರದೃಷ್ಟಿಯ ಸಂಬಂಧ ವೃದ್ಧಿ: ಏನೆಲ್ಲ ಲಾಭ?

ಇದೇ ತಿಂಗಳ ಕೊನೆ ವಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್​ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಈ ವೇಳೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆಯಿದೆ.

Trump, Modi to outline ambitious vision for next chapter of Indo-US ties
ಟ್ರಂಪ್ ಭಾರತ ಭೇಟಿ

By

Published : Feb 14, 2020, 11:08 AM IST

Updated : Feb 14, 2020, 11:19 AM IST

ವಾಷಿಂಗ್ಟನ್​​: ಇದೇ ತಿಂಗಳ ಕೊನೆ ವಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ, ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ- ಭಾರತ ರಾಜತಾಂತ್ರಿಕ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಸುಮಾರು ಎರಡು ದಶಕಗಳ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಮತ್ತು ಅಮೆರಿಕವನ್ನು " ಸ್ವಾಭಾವಿಕ ಮಿತ್ರರಾಷ್ಟ್ರಗಳು" ಎಂದು ಕರೆದಿದ್ರು ಎಂದು ವೆಲ್ಸ್ ಇದೇ ವೇಳೆ ನೆನಪಿಸಿಕೊಂಡರು.

ಅಮೆರಿಕ-ಭಾರತದ ಉಭಯ ನಾಯಕರ ಈ ಭೇಟಿ, ಪ್ರಧಾನಿ ವಾಜಪೇಯಿ ಅವರು ವಾಷಿಂಗ್ಟನ್‌ನ ಭೇಟಿ ನೀಡಿದ 20ನೇ ವಾರ್ಷಿಕೋತ್ಸವದ ಪ್ರತೀಕ ಎಂದೂ ಬಣ್ಣಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅಮೆರಿಕ​​- ಇಂಡಿಯಾ ಜೊತೆಯಾಗಿ ಬಹಳ ದೂರ ಸಾಗಿ ಬಂದಿದ್ದೇವೆ. ಇದೇ ಹಾದಿಯಲ್ಲಿ ಟ್ರಂಪ್ - ಮೋದಿ ಸಹ ಸಾಗುತ್ತಿದ್ದ ನಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದು ವೇಲ್ಸ್​ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಭಾರತದ ರಾಯಭಾರಿ ಸಂಧು, ಅಮೆರಿಕ ಅಧ್ಕಕ್ಷರ ಐತಿಹಾಸಿಕ ಭಾರತ ಭೇಟಿಗೆ ನಾವು ಸಾಕ್ಷಿಯಾಗಲಿದ್ದೇವೆ. ಈ ಭೇಟಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಹಭಾಗಿತ್ವವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Last Updated : Feb 14, 2020, 11:19 AM IST

ABOUT THE AUTHOR

...view details