ಕರ್ನಾಟಕ

karnataka

ETV Bharat / bharat

F-35 v/s S-400 ಫೈಟ್​: ಭಾರತದ ಮುಂದೆ 'ದೊಡ್ಡ'ಣ್ಣನ ಆಫರ್‌! ಏನ್ಮಾಡ್ತಾರೆ ಮೋದಿ? -

ಅಮೆರಿಕದ 5ನೇ ತಲೆಮಾರಿನ ಎಫ್​-35 ಫೈಟರ್​ ಜೆಟ್​ ಸಂಬಂಧದ ₹ 37 ಸಾವಿರ ಕೋಟಿ ರೂ ಮೊತ್ತದ ಷರತು ಬದ್ಧ ರಕ್ಷಣಾ ಸಾಮಾಗ್ರಿ ವ್ಯಾಪಾರದ ಕೊಡುಗೆಯನ್ನು ಟ್ರಂಪ್​ ಅವರು ಪ್ರಧಾನಿ ಮೋದಿ ಮುಂದಿಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jun 8, 2019, 6:10 PM IST

ನವದೆಹಲಿ:ಭಾರತ, ರಷ್ಯಾದೊಂದಿಗೆ ಎಸ್​-400 ವಾಯು ರಕ್ಷಣಾ ಕ್ಷಿಪಣಿ ಖರೀದಿ ಒಪ್ಪಂದ ಕೈಬಿಟ್ಟರೆ, ಇದಕ್ಕಿಂತ ದೊಡ್ಡ ರಕ್ಷಣಾ ವ್ಯಾಪಾರದ ಕೊಡುಗೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕ ತಯಾರಿಸಿದ 5ನೇ ತಲೆಮಾರಿನ ಎಫ್​-35 ಫೈಟರ್​ ಜೆಟ್​ ಅನ್ನು ವಾಯುಪಡೆ ಹಾಗೂ ನೌಕಪಡೆಗೆ ಬಳಸಬಹುದಾಗಿದೆ. ಇದು ₹ 37 ಸಾವಿರ ಕೋಟಿ (5.43 ಬಿಲಿಯನ್ ಡಾಲರ್​) ಮೊತ್ತದ ಷರತ್ತುಬದ್ದ ರಕ್ಷಣಾ ಒಪ್ಪಂದ ಇದಾಗಿದ್ದು, ಟ್ರಂಪ್​ ಅವರು ಪ್ರಧಾನಿ ಮೋದಿ ಮುಂದೆ ಈ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗಿದೆ.

ರಷ್ಯಾ ಜೊತೆಗಿನ ಐತಿಹಾಸಿಕ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದದಿಂದ ಹಿಂದೆ ಸರಿಯುವಂತೆ ಭಾರತಕ್ಕೆ ಅಮೆರಿಕ ಒತ್ತಡ ಹಾಕುತ್ತಿದೆ. ಕಳೆದ ವರ್ಷದ ಅಕ್ಟೋಬರ್​ನಲ್ಲಿ ಎಸ್​-400 ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಾಷಿಂಗ್ಟನ್​, 'ಭವಿಷ್ಯದ ಸುಧಾರಿತ ತಂತ್ರಜ್ಞಾನಗಳ ಒಪ್ಪಂದದ ಮೇಲೆ ಇದು ಪರಿಣಾಮ ಬೀರಲಿದೆ' ಎಂದು ಎಚ್ಚರಿಸಿತ್ತು.

ಭಾರತ ಈಗಾಗಲೇ ಎಸ್​-400 ಕ್ಷಿಪಣಿ ಒಡಂಬಡಿಕೆಗೆ ಸಹಿ ಮಾಡಿದ್ದು, ಭಾರತ ನ್ಯಾಟೋ ಮಿತ್ರ ಕೂಟಗಳತ್ತ ದೃಷ್ಟಿನೆಟ್ಟು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಒಪ್ಪಂದ ರದ್ದಾಗದಿದ್ದರೆ ನಿರ್ಬಂಧ ಹೇರುವ ಬೆದರಿಕೆಯನ್ನೂ ಅಮೆರಿಕ ಒಡ್ಡಿದೆ. ಪ್ರಧಾನಿ ಮೋದಿ ಯಾವ ರಾಷ್ಟ್ರದತ್ತ ಒಲವು ತೊರುತ್ತಾರೆ? ಎಂಬುದೀಗ ಕುತೂಹಲ.

For All Latest Updates

TAGGED:

ABOUT THE AUTHOR

...view details