ಕರ್ನಾಟಕ

karnataka

ETV Bharat / bharat

ಲೈಸನ್ಸ್ ಇಲ್ಲ, ಓವರ್ ಲೋಡ್ ಹಿನ್ನೆಲೆ... ಟ್ರಕ್ ಚಾಲಕನಿಗೆ ದೇಶದಲ್ಲೇ ಗರಿಷ್ಠ ದಂಡ..! - ಟ್ರಾಫಿಕ್ ನಿಮಯ ಉಲ್ಲಂಘನೆ

ಹರಿಯಾಣ ನೋಂದಣಿಯ ಟ್ರಕ್​​ ಚಾಲಕನ ಸಮರ್ಪಕ ದಾಖಲೆಯ ಕೊರತೆ ಹಾಗೂ ಓವರ್​ಲೋಡ್​​ ಪರಿಣಾಮ ಜಿಟಿ ಕರ್ನಲ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 2 ಲಕ್ಷದ 500 ರೂ. ದಂಡ ವಿಧಿಸಿದ್ದಾರೆ.

ಟ್ರಕ್ ಚಾಲಕನಿಗೆ ದೇಶದಲ್ಲೇ ಗರಿಷ್ಠ ದಂಡ

By

Published : Sep 13, 2019, 9:19 AM IST

ನವದೆಹಲಿ:ನೂತನ ಮೋಟಾರು ವಾಹನ ಕಾಯ್ದೆ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು, ನಿಯಮ ಉಲ್ಲಂಘಿಸಿದ ಸವಾರರು ಸಾವಿರ ಸಾವಿರ ದಂಡ ಕಟ್ಟುತ್ತಿದ್ದಾರೆ. ಇದೀಗ ರಾಷ್ಟ್ರ ರಾಜಧಾನಿಯ ಟ್ರಕ್ ಡ್ರೈವರ್ ಕಟ್ಟಿದ ದಂಡ ಮೊತ್ತ ಈ ಹಿಂದಿನ ಎಲ್ಲ ದಾಖಲೆಯನ್ನೂ ಮುರಿದಿದೆ.

ದಂಡದ ಚಲನ್

ಹರಿಯಾಣ ನೋಂದಣಿಯ ಟ್ರಕ್​​ ಚಾಲಕನ ಸಮರ್ಪಕ ದಾಖಲೆಯ ಕೊರತೆ ಹಾಗೂ ಓವರ್​ಲೋಡ್​​ ಪರಿಣಾಮ ಜಿಟಿ ಕರ್ನಲ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 2 ಲಕ್ಷದ 500 ರೂ. ದಂಡ ವಿಧಿಸಿದ್ದಾರೆ.

ರಸ್ತೆ ನಿಯಮ ಉಲ್ಲಂಘನೆ... ಬರೋಬ್ಬರಿ ರೂ 1,41,700 ದಂಡ ಕಟ್ಟಿದ ಲಾರಿ ಚಾಲಕ!

ಮೂರು ದಿನದ ಹಿಂದೆ ರಾಜಸ್ಥಾನದಲ್ಲಿ ಓವರ್​ಲೋಡ್ ಪರಿಣಾಮ ಟ್ರಕ್ ಚಾಲಕನಿಗೆ 1 ಲಕ್ಷದ 41 ಸಾವಿರ ದಂಡ ವಿಧಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಆದರೆ ಈ ದಾಖಲೆ ಗುರುವಾರ ಮುರಿದು ಬಿದ್ದಿದೆ.

ABOUT THE AUTHOR

...view details