ಬನ್ಸ್ವಾರ (ರಾಜಸ್ಥಾನ): ಸಹೋದರಿ ಮನೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳುತ್ತಿದ್ದ ನಾಲ್ವರು ಸಹೋದರರ ಬೈಕ್ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಂಗಿ ನೋಡಲು ಹೊರಟ ಸಹೋದರರು ಮಸಣ ಸೇರಿದರು! - ಬನ್ಸ್ವಾರ ಅಪಘಾತ ಸುದ್ದಿ
ಸಹೋದರಿ ಮನೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳುತ್ತಿದ್ದ ನಾಲ್ವರು ಟ್ರಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ದಾನಪುರ ಪೊಲೀಸ್ ಠಾಣೆ ಪ್ರದೇಶದ ಕಾಂಟುಬಿ ಆದಿಭಿತ್ ಪ್ರದೇಶದಲ್ಲಿ ಈ ಅಪಘಾತ ನಡೆದಿದ್ದು, ಒಂದು ಬೈಕ್ನಲ್ಲಿ ನಾಲ್ವರು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರಲ್ಲಿ ಇಬ್ಬರು ಸಹೋದರರು ಮತ್ತು ಇನ್ನಿಬ್ಬರು ಸೋದರ ಸಂಬಂಧಿಗಳು. ಮೃತರೆಲ್ಲರೂ ಖೋರಪಾಡ ನಿವಾಸಿಗಳು ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಅಂಬಾಪುರ ಮತ್ತು ದಾನಪುರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ, ಅಪಘಾತ ಸಂಭವಿಸುತ್ತಿದ್ದಂತೆ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ಘಟನೆಯಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಟ್ರಕ್ ಉದಯಪುರದ ಕೇಸರಿಯಾಜಿಯಿಂದ ಭೋಪಾಲ್ಗೆ ತೆರಳಲುತ್ತಿತ್ತು ಎಂದು ತಿಳಿದು ಬಂದಿದೆ.