ಹೈದರಾಬಾದ್:ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನೋಮುಲಾ ನರಸಿಂಹಯ್ಯ (64) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಹೃದಯಸ್ತಂಭನ ಉಂಟಾಗಿದ್ದರಿಂದ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗಿದೆ ಇಂದು ಮುಂಜಾನೆ ಅವರು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನೋಮುಲಾ ನರಸಿಂಹಯ್ಯ 1956 ರ ಜನವರಿ 9 ರಂದು ನಲ್ಗೊಂಡ ಜಿಲ್ಲೆಯ ಪಾಲೆಮ್ ಗ್ರಾಮದಲ್ಲಿ ಜನಿಸಿದರು. ಅವರು 1999 ಮತ್ತು 2004 ರಲ್ಲಿ ಸಿಪಿಎಂ ಪಕ್ಷದಿಂದ ನಾಗಾರ್ಜುನ ಸಾಗರ್ದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
2013 ಅವರು ಟಿಆರ್ಎಸ್ ಪಕ್ಷ ಸೇರಿದ್ದ ನೋಮುಲಾ, 2018 ರ ಚುನಾವಣೆಯಲ್ಲಿ ನಾಗಾರ್ಜುನ ಸಾಗರ್ ಕ್ಷೇತ್ರದಿಂದ ಟಿಆರ್ಎಸ್ ಪಕ್ಷದಿಂದ ಮತ್ತೊಮ್ಮೆ ಶಾಸಕರಾಗಿದ್ದರು.
ಓದಿ:ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ಸುಳ್ಳು ಸುದ್ದಿ: ಹೈದರಾಬಾದ್ ಪೊಲೀಸರ ಸ್ಪಷ್ಟನೆ