ಸುಕ್ಮಾ(ಛತ್ತೀಸ್ಗಢ):ಮಾವೋವಾದಿಗಳಿಂದ ಅಪಹರಣಕ್ಕೊಳಗಾಗಿದ್ದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ನಾಯಕ ನಲ್ಲೂರಿ ಶ್ರೀನಿವಾಸ ರಾವ್‌ರನ್ನು ಬರ್ಬರ ಹತ್ಯೆ ಮಾಡಲಾಗಿದೆ.
ನಕ್ಸಲರಿಂದ ಟಿಆರ್ಎಸ್ ನಾಯಕನ ಕಿಡ್ನ್ಯಾಪ್, ಮರ್ಡರ್.. ಕಾರಣ..? - ಅಪಹರಣ
ಅಪಹರಣವಾಗಿದ್ದ ಟಿಆರ್ಎಸ್ ನಾಯಕ ನಲ್ಲೂರಿ ಶ್ರೀನಿವಾಸ ರಾವ್ ಮೃತದೇಹ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪುಟ್ಟಪಡು ಗ್ರಾಮದಲ್ಲಿ ಪತ್ತೆಯಾಗಿದೆ.
ಅಪಹರಣವಾಗಿದ್ದ ಟಿಆರ್ಎಸ್ ನಾಯಕ ನಲ್ಲೂರಿ ಶ್ರೀನಿವಾಸ ರಾವ್ ಮೃತದೇಹ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪುಟ್ಟಪಡು ಗ್ರಾಮದಲ್ಲಿ ಪತ್ತೆಯಾಗಿದೆ.45 ವರ್ಷದ ಶ್ರೀನಿವಾಸ ರಾವ್‌ರನ್ನು ಸೋಮವಾರ ಮಧ್ಯರಾತ್ರಿ ವೇಳೆ ತೆಲಂಗಾಣದ ಭದ್ರಾದ್ರಿ-ಕೊತ್ತಗುಡಂ ಜಿಲ್ಲೆಯ ಕೊತ್ತೂರು ಗ್ರಾಮದಿಂದ ಅಪಹರಣ ಮಾಡಲಾಗಿತ್ತು. ಶ್ರೀನಿವಾಸ ರಾವ್ ನಕ್ಸಲರ ಮಾಹಿತಿದಾರ ಎನ್ನುವ ಕಾರಣಕ್ಕೆ ಅಪಹರಿಸಿ ಹತ್ಯೆ ಮಾಡಲಾಗಿದೆ ಎನ್ನುವ ಕಾರಣ ತಿಳಿದು ಬಂದಿದೆ.
ಸುಮಾರು ಹತ್ತರಿಂದ ಹದಿನೈದು ಅಪರಿಚಿತರು ಆಯುಧಗಳೊಂದಿಗೆ ಬಂದು ಪತಿಯನ್ನು ಎಳೆದೊಯ್ದಿದ್ದಾರೆ. ಈ ವೇಳೆ ಪುತ್ರ ಎಷ್ಟೇ ಬೇಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಮೃತ ಶ್ರೀನಿವಾಸ ರಾವ್ ಪತ್ನಿ ದುರ್ಗಾ ಮಾಹಿತಿ ನೀಡಿದ್ದಾರೆ.