ಲಖಿಂಪುರ್ ಖೇರಿ (ಉತ್ತರ ಪ್ರದೇಶ): ಭಾರತ ಮತ್ತು ನೇಪಾಳದ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಉತ್ತರ ಪ್ರದೇಶದ ಆರ್ಥಿಕತೆ ಮೇಲೆ ಗಾಢ ಪರಿಣಾಮ ಬೀರಿದೆ. ನೇಪಾಳದೊಂದಿಗೆ ಉತ್ತರಪ್ರದೇಶ ಸುಮಾರು 105 ಕಿ.ಲೋ ಮೀಟರ್ ಗಡಿ ಹಂಚಿಕೊಂಡಿದೆ. ಈ ಮೊದಲು ಜನರು ಇಲ್ಲಿ ಯಾವುದೇ ನಿರ್ಬಂಧವಿಲ್ಲದೇ ಮುಕ್ತವಾಗಿ ವ್ಯಾಪಾರ ಮಾಡುತ್ತಿದ್ದರು. ಆದರೆ, ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದಗಳಿಂದಾಗಿ ಇಲ್ಲಿನ ವ್ಯಾಪಾರ ಕುಂಠಿತಗೊಂಡಿದ್ದು, ಜನತೆ ಕಂಗಾಲಾಗಿದ್ದಾರೆ.
ಕೋವಿಡ್ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿದ್ದವರಿಗೆ ಈ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿನ ವ್ಯಾಪಾರಿಗಳ ಪ್ರಕಾರ ಶೇಕಡ 80 ರಷ್ಟು ವ್ಯವಹಾರ ಅಪಾಯದಲ್ಲಿದೆ.