ಅಯೋಧ್ಯೆ(ಉತ್ತರ ಪ್ರದೇಶ):ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆಂಬ ಕಾರಣಕ್ಕೆ ಪತಿರಾಯ ಆಕೆಗೆ ತ್ರಿಪಲ್ ತಲಾಖ್ ಘೋಷಿಸಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.
ಇಲ್ಲಿನ ಹೈದರ್ ಗಂಜ್ ತೆಹ್ಸಿಲ್ನ ಜನ ಬಝಾರ್ ನಿವಾಸಿಯಾಗಿರೋ 23 ವರ್ಷದ ಝಾಫ್ರಿನ್ ಅಂಜುಮ್ಗೆ, ಕಳೆದ ಅಗಸ್ಟ್ 18ರಂದು ಪತಿ ಅಸ್ತಿಖರ್ ಅಹ್ಮದ್ ತಲಾಖ್ ನೀಡಿದ್ದಾನೆ. ಈ ತ್ರಿವಳಿ ತಲಾಖ್ಗೆ ಕಾರಣ ಮಾತ್ರ ಬಾಲಿಶವಾಗಿದೆ. ಝಾಫ್ರಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹೆಣ್ಣು ಎಂಬ ಕಾರಣಕ್ಕೆ ರೋಷಗೊಂಡ ಪತಿ ತಲಾಖ್ ನೀಡಿದ್ದಾನೆ. ಇದಕ್ಕೂ ಮುಂಚೆ ಝಾಫ್ರಿನ್ ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಳಂತೆ. ಅಲ್ಲದೆ ಝಾಫ್ರಿನ್ ಪತಿಯ ವರದಕ್ಷಿಣೆ ಬೇಡಿಕೆಯನ್ನು ಝಾಫ್ರಿನ್ ತಂದೆ ಪೂರೈಸಿಲ್ಲವೆಂದು ತಲಾಖ್ ನೀಡಲಾಗಿದೆ ಎನ್ನಲಾಗಿದೆ.