ಉನ್ನಾವೊ (ಉತ್ತರ ಪ್ರದೇಶ ) :ಜಿಲ್ಲೆಯ ಪುರಾನ್ ಖೇಡಾ ಗ್ರಾಮದ ಹೊರವಲಯದಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿಯ ಮೃತ ದೇಹ ಪತ್ತೆಯಾಗಿದ್ದು, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಉನ್ನಾವೊದಲ್ಲಿ ತಾಯಿ, ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆ: ಹತ್ಯೆ ಶಂಕೆ - triple murder in unnao
ಉತ್ತರ ಪ್ರದೇಶದ ಉನ್ನಾವೊದ ಗ್ರಾಮವೊಂದರ ಹೊರವಲಯದಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ತ್ರಿವಳಿ ಹತ್ಯೆ
ಮೂವರ ಮೃತ ದೇಹಗಳು ಗ್ರಾಮದ ಹೊರವಲಯದ ಕೆರೆಯ ಬಳಿ ಪತ್ತೆಯಾಗಿದ್ದು, ಶವಗಳ ಕುತ್ತಿಗೆಯಲ್ಲಿ ಬಟ್ಟೆಯಿಂದ ಬಿಗಿದ ಗುರುತುಗಳು ಕಂಡು ಬಂದಿರುವುದರಿಂದ ಕೊಲೆ ಮಾಡಿ ಶವ ಬಿಸಾಕಿ ಹೋಗಿರಬಹುದೆಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ರಾಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಧಿ ವಿಜ್ಞಾನ ತಜ್ಞರು ಕೂಡ ಆಗಮಿಸಿದ್ದಾರೆ.