ಹರೋವಾ(ಪಶ್ಚಿಮ ಬಂಗಾಳ):ಉತ್ತರ 24 ಪರಗಣ ಜಿಲ್ಲೆಯ ಹರೋವಾದಲ್ಲಿ ಅರೆನಗ್ನ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಬುಡಕಟ್ಟು ಯುವತಿಯನ್ನು ರಕ್ಷಿಸಲಾಗಿದೆ.
ಅರೆ ನಗ್ನ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಬುಡಕಟ್ಟು ಯುವತಿಯ ರಕ್ಷಣೆ - ರಸ್ತೆ ಬದಿ ಬಿದ್ದಿದ್ದ ಬುಡಕಟ್ಟು ಯುವತಿಯ ರಕ್ಷಣೆ
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೈಕಾಲು ಕಟ್ಟಿ ಹಾಕಿ ಕಾಮುಕರು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬುಡಕಟ್ಟು ಯುವತಿಯ ರಕ್ಷಣೆ
ಯುವತಿ ಕೈಕಾಲು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು. ಆಕೆ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಕೈಕಾಲು ಕಟ್ಟಿ ಹಾಕಿ ರಸ್ತೆ ಬದಿ ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸದ್ಯ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ವಿರೋಧಿಸಿ ಹರೋವಾದ ವಿವಿಧ ಕಡೆಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.