ಹೈದರಾಬಾದ್:ಕೋಳಿ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಸರಿಯಾಗಿ ಸಂಬಳ ನೀಡದ್ದಕ್ಕಾಗಿ ಮಾಲೀಕನ ಬಳಿ ತಮ್ಮ ದುಡಿಮೆ ಹಣ ನೀಡುವಂತೆ ಕೇಳಿದ್ದಕ್ಕಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ತೆಲಂಗಾಣದ ರಾಚಕೊಡದಲ್ಲಿ ನಡೆದಿದೆ.
ಅಮಾನವೀಯ! ಬಾಕಿ ಸಂಬಳ ಕೇಳಿದ್ದಕ್ಕೆ ಮಹಿಳೆ ಮೇಲೆ ಮೂರು ದಿನ ಅತ್ಯಾಚಾರ, ಗಂಡನಿಗೆ ಹಲ್ಲೆ! - ಕೋಳಿ ಫಾರ್ಮ್
ಕೆಲಸ ಮಾಡಿ ಸಂಬಳ ಕೇಳಿದ್ದಕ್ಕಾಗಿ ಕೋಳಿ ಫಾರ್ಮ್ ಮಾಲೀಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ನಡೆದಿದೆ.
ನಾಗರಕರ್ನೂಲ್ ಮೂಲದ ಬುಡಕಟ್ಟು ದಂಪತಿ ಪ್ರಸಾದ್ ರೆಡ್ಡಿ ಕೋಳಿ ಫಾರ್ಮ್ನಲ್ಲಿ ತಿಂಗಳ ಸಂಬಳ 15 ಸಾವಿರದಂತೆ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಮಾಲೀಕ ಇವರಿಗೆ ಸಂಬಳ ನೀಡಿರಲಿಲ್ಲ. ಬಾಕಿ ಸಂಬಳ ಕೇಳಿದ್ದಕ್ಕಾಗಿ ಇಬ್ಬರನ್ನೂ ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಆಕೆಯ ಪತ್ನಿಯ ಮೇಲೆ ಮೂವರೂ ಅತ್ಯಾಚಾರವೆಸಗಿದ್ದಾರೆ. ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 21ರವರೆಗೆ ನಿರಂತರವಾಗಿ ಈ ಕೃತ್ಯವೆಸಗಿದ್ದು, ಈ ಘಟನೆ ಬಗ್ಗೆ ಬಾಯಿ ಬಿಟ್ಟರೆ ಮಾಹಿತಿ ಜೀವಂತವಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿಗಳಿಂದ ತಪ್ಪಿಸಿಕೊಂಡ ಇವರು ಸೆಪ್ಟೆಂಬರ್ 26ರಂದು ರಾಚಕೊಡ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮರೆಸಿಕೊಂಡ ಕಾಮುಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.