ಕರ್ನಾಟಕ

karnataka

ETV Bharat / bharat

ದೇಶದ ಪ್ರಥಮ ಕೊರೊನಾ ಲಸಿಕೆ 'ಕೋವಾಕ್ಸಿನ್' ಭರವಸೆ: ಕೆಲ ವಾರಗಳಲ್ಲಿ ಫಲಿತಾಂಶ ಪ್ರಕಟ!

ದೇಶೀಯವಾಗಿ ಕೋವಿಡ್​-19 ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಎರಡು ಭಾರತೀಯ ಲಸಿಕೆಗಳು ತಮ್ಮ ಸ್ಟೇಜ್​​-I ಮತ್ತು ಸ್ಟೇಜ್​-IIನ ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ.

ಲಸಿಕೆ

By

Published : Aug 18, 2020, 9:46 PM IST

ನವದೆಹಲಿ: ಭಾರತ್ ಬಯೋಟೆಕ್ ಕಂಡುಹಿಡಿಯುತ್ತಿರುವ ಕೋವಿಡ್-19 ಲಸಿಕೆ 'ಕೋವಾಕ್ಸಿನ್'ನ ಮಾನವ ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶಿಯವಾಗಿ ಕೋವಿಡ್​-19 ಲಸಿಕೆಗಳ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಎರಡು ಭಾರತೀಯ ಲಸಿಕೆಗಳು ತಮ್ಮ ಸ್ಟೇಜ್​​-I ಮತ್ತು ಸ್ಟೇಜ್​-IIನ ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ.

ಎರಡೂ ದೇಶಿಯ ಕೋವಿಡ್ -19 ಲಸಿಕೆಗಳ ಹಂತ -I ಮತ್ತು ಹಂತ- II ಮಾನವ ಕ್ಲಿನಿಕಲ್ ಪ್ರಯೋಗಗಳು ಉತ್ತಮವಾಗಿ ಸಾಗುತ್ತಿವೆ. ಫಲಿತಾಂಶ ಏನೆಂಬುದನ್ನು ಇನ್ನು ಕೆಲವು ವಾರಗಳಲ್ಲಿ ತಿಳಿಯಲಿದೆ. ಲಸಿಕೆಗಳ ಪ್ರಯೋಗ ಕಾರ್ಯಗಳು ಉತ್ತಮವಾದ ಪ್ರಗತಿಯಲ್ಲಿವೆ. ಮೂರನೇ ಲಸಿಕೆಯ (ಆಕ್ಸ್‌ಫರ್ಡ್ ಮೆಂಬರ್​) ಮಾನವ ಕ್ಲಿನಿಕಲ್ ಪ್ರಯೋಗಗಳ ಮೂರನೇ ಹಂತ ನಾಳೆಯಿಂದ ಪ್ರಾರಂಭಿಸಲಾಗುವುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್​ ಹೇಳಿದ್ದಾರೆ.

ಪಾಲ್ ಅವರು ಕೋವಿಡ್​ ಲಸಿಕೆ ಆಡಳಿತ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶೀಘ್ರದಲ್ಲೇ ಭಾರತೀಯ ಕೋವಿಡ್ -19 ಲಸಿಕೆ ಬರುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಯೋಗಗಳಿಗೆ ಹೋಗುವ ಎಲ್ಲಾ ಲಸಿಕೆಗಳು ಯಶಸ್ವಿಯಾಗುತ್ತವೆ ಎಂದು ಭಾವಿಸಬೇಡಿ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಭಾರತ್ ಬಯೋಟೆಕ್ ಮತ್ತು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಎರಡು ದೇಶಿಯ ಲಸಿಕೆಗಳ ಶೋಧನೆಯ ಕೆಲಸ ಮಾಡುತ್ತಿವೆ, ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಸ್‌ಫರ್ಡ್ ಲಸಿಕೆ ಮೆಂಬರ್​ ಮಾನವ ಕ್ಲಿನಿಕಲ್ ಪ್ರಯೋಗದ ಮೂರನೇ ಹಂತವನ್ನು ಪ್ರಾರಂಭಿಸಲಿದೆ.

ಲಸಿಕೆಗಳಿಗೆ ಕಾಲಮಿತಿ ನೀಡುವುದು ಸರಿಯಲ್ಲ. ಲಸಿಕೆ ತಯಾರಕರೊಂದಿಗೆ ಮಾತುಕತೆ ಕೂಡ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇದು ಅವರಿಗೆ ಧೈರ್ಯ ತುಂಬುತ್ತದೆ. ಚರ್ಚೆಯ ವೇಳೆಯಲ್ಲಿ ಬೆಲೆ ಮತ್ತು ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ್ದೇವೆ. ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಂಪನಿಗಳನ್ನು ಕೇಳಿದ್ದೇವೆ ಎಂದರು.

ABOUT THE AUTHOR

...view details