ಕರ್ನಾಟಕ

karnataka

ETV Bharat / bharat

ಹಗರಣದ ಸುಳಿಯಲ್ಲಿ ಚಿದಂಬರಂ: ಮಾಜಿ ಕೇಂದ್ರ ಸಚಿವರಿಗೆ ಇಂದು ಡಿ-ಡೇ! - ಐಎನ್​ಎಕ್ಸ್ ಮೀಡಿಯಾ ಹಗರಣ

ಏರ್ಸೆಲ್ ಮಾಕ್ಸಿಸ್ ಕೇಸ್​ನಲ್ಲಿ ಕೆಳಹಂತದ ನ್ಯಾಯಾಲಯ ಕಾಯ್ದಿರಿಸಿದ್ದ ಮಧ್ಯಂತರ ಜಾಮೀನಿನ ವಿಚಾರಣೆ ಇಂದು ಕೋರ್ಟ್​ ಮುಂದೆ ಬರಲಿದೆ. ಏರ್ಸೆಲ್ ಮ್ಯಾಕ್ಸಿಸ್ ಕೇಸ್​ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಚಿದಂಬರಂ

By

Published : Sep 5, 2019, 9:52 AM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪಾಲಿಗೆ ಇಂದು ಅತ್ಯಂತ ಮಹತ್ವ ದಿನ.

ಏರ್ಸೆಲ್ ಮಾಕ್ಸಿಸ್ ಕೇಸ್​ನಲ್ಲಿ ಕೆಳಹಂತದ ನ್ಯಾಯಾಲಯ ಕಾಯ್ದಿರಿಸಿದ್ದ ನಿರೀಕ್ಷಣಾ ಜಾಮೀನಿನ ವಿಚಾರಣೆ ಇಂದು ನಡೆಯಲಿದೆ. ಏರ್ಸೆಲ್ ಮ್ಯಾಕ್ಸಿಸ್ ಕೇಸ್​ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಜಸ್ಟೀಸ್ ಭಾನುಮತಿ ಹಾಗೂ ಎ.ಎಸ್.ಬೋಪಣ್ಣ ನೇತೃತ್ವದ ಪೀಠ ಆಗಸ್ಟ್ 29ರಂದು ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಜಾರಿ ನಿರ್ದೇಶನಾಲಯದ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಕೆ ಮಾಡಿರುವ ದಾಖಲೆಗಳನ್ನು ನೋಡಬೇಕೋ ಇಲ್ಲವೋ ಎನ್ನುವುದನ್ನೂ ಇಂದು ಕೋರ್ಟ್​ ತೀರ್ಮಾನಿಸಲಿದೆ.

ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿದು ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗುತ್ತಿದೆ. ಆಗಸ್ಟ್ 21ರ ರಾತ್ರಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು.

ABOUT THE AUTHOR

...view details