ನವದೆಹಲಿ: ಜೂ.1 ರಿಂದ ವಿಶೇಷ ರೈಲು ಸೇವೆಗೆ ಬೆಳಗ್ಗೆ 10 ಗಂಟೆಯಿಂದಲೇ ಟಿಕೆಟ್ ಬುಕ್ಕಿಂಗ್ ಆರಂಭಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ತುರಂತ್, ಸಂಪರ್ಕ ಕ್ರಾಂತಿ, ಜನ್ ಶತಾಬ್ದಿ ಮತ್ತು ಪೂರ್ವ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ರೈಲುಗಳ ಟಿಕೆಟ್ ದರ ಸಾಮಾನ್ಯವಾಗಿರಲಿದೆ. ಆದ್ರೆ ಸಾಮಾನ್ಯ ಕೋಚ್‌ಗಳಲ್ಲಿನ 2ಎಸ್ ಸೀಟ್‌ಗಳನ್ನು ಕಾಯ್ದಿರಿಸಿದರೆ ಹೆಚ್ಚುವರಿ ದರವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದೆ. ಎಲ್ಲ ಪ್ರಯಾಣಿಕರಿಗೂ ಸೀಟಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.