ನವದೆಹಲಿ:ದೇಶದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಿಲಿಟರಿ ಪೊಲೀಸ್ ಸೇವೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಗಿದ್ದು, '100 ಮಹಿಳಾ ಸಿಬ್ಬಂದಿಯ ಮೊದಲ ಬ್ಯಾಚ್‌ಗೆ ತರಬೇತಿಯು ಜನವರಿ 6ರಿಂದ ಆರಂಭವಾಗಿದೆ' ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ತಿಳಿಸಿದ್ದಾರೆ.
ಐತಿಹಾಸಿಕ ನಿರ್ಧಾರ ಎಂಬಂತೆ ಸೇನೆಯು ಕಳೆದ ವರ್ಷ ಮಿಲಿಟರಿ ಪೊಲೀಸ್ ಸೇವೆಗೆ ಮಹಿಳೆಯರನ್ನು ಸೇರಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಸುಮಾರು ಎರಡು ವರ್ಷಗಳ ನಂತರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಹಿಳೆಯರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದರು.