ಪಾಟ್ನಾ (ಬಿಹಾರ): ರಕ್ಕಸ ಕೊರೊನಾ ಹರಡುವಿಕೆ ಪರಿಣಾಮ ಮಾರ್ಚ್ 31 ರವರೆಗೆ ರೈಲು ಸಂಚಾರ ರದ್ದುಗೊಳಿಸಿ ಭಾರತೀಯ ರೈಲ್ವೆ ಪ್ರಾಧಿಕಾರಿ ಆದೇಶ ಹೊರಡಿಸಿದೆ. ಹಾಗಾಗಿ ಪಾಟ್ನಾದ ಬಸ್ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ತುಂಬಲಾಗುತ್ತಿದೆ.
ರೈಲು ಸಂಚಾರ ರದ್ದು... ಬಸ್ ಒಳಗೂ, ಟಾಪ್ನಲ್ಲೂ ಜನವೋ ಜನ! - Train Cancellation in Patna
ಬಿಹಾರ ಸರ್ಕಾರ ಲಾಕ್ ಡೌನ್ ಘೋಷಿಸಿದ್ದರೂ ಸಹ ಒಂದೇ ಬಸ್ ಒಳಗೆ ಹಾಗೂ ಟಾಪ್ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿರೋದು ಮತ್ತಷ್ಟು ಕೊರೊನಾ ಸೋಂಕು ಹರಡುವಿಕೆಗೆ ಕಾರಣವಾಗಿದೆ.
ಈಗಾಗಲೇ ಬಿಹಾರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೂ, ಒಂದೇ ಬಸ್ನೊಳಗೆ ಹಾಗೂ ಬಸ್ ಮೇಲೆ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಮತ್ತಷ್ಟು ಹರಡುವಿಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮಾರಣಾಂತಿಕ ವೈರಸ್ಗೆ ಈಗಾಗಲೇ ಓರ್ವ ಸಾವನ್ನಪ್ಪಿದ್ದಾನೆ.
ಸರ್ಕಾರ ಕೊರೊನಾ ಹರಡುವಿಕೆ ತಡೆಗಟ್ಟಲು ಹತ್ತಾರು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ, ಜನರು ಈ ರೀತಿ ಬೇಜವಾಬ್ದಾರಿ ತೋರಿದರೆ ಸರ್ಕಾರಗಳು ತಾನೇ ಏನು ಮಾಡುತ್ತವೆ ಹೇಳಿ?. ಅಲ್ಲದೆ, ಕೇಂದ್ರ ಸರ್ಕಾರ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ.