ನಿಜಾಮಾಬಾದ್:ಆ ಮಂಟಪದಲ್ಲಿ ಮದುವೆ ಸಮಾರಂಭ ಜೋರಾಗಿತ್ತು. ಸಂಬಂಧಿಗಳೆಲ್ಲರೂ ಸಂತೋಷದಿಂದಲೇ ಮದುವೆ ಕಾರ್ಯ ಕೈಗೊಂಡಿದ್ದರು. ಆ ಜೋಡಿ ಹಕ್ಕಿ ಆಗತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟತ್ತು. ಆದ್ರೆ ವಿಧಿ ಅವರಿಬ್ಬರನ್ನು ಒಂದು ಮಾಡಲು ಬೀಡಲೇ ಇಲ್ಲ.
ವಧುವಿನೊಂದಿಗೆ ಡ್ಯಾನ್ಸ್ ಮಾಡಿ ಪ್ರಾಣ ಬಿಟ್ಟ ವರ... ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೀತು ಎದೆ ನಡುಗೋ ದುರಂತ! - groom death in marriage celebration,
ಅವರಿಬ್ಬರು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ವಿಧಿ ವಧುವಿನಿಂದ ಕೆಲವೇ ಕ್ಷಣಗಳಲ್ಲಿ ವರನನ್ನೂ ಕಿತ್ತುಕೊಂಡು ಬಿಟ್ಟಿದ್ದಾನೆ. ಹೌದು ಇಂತಹದೊಂದು ಎದೆ ನಡುಗುವ ಘಟನೆ ಪಕ್ಕದ ತೆಲಂಗಾಣದಲ್ಲಿ ನಡೆದಿದೆ.
![ವಧುವಿನೊಂದಿಗೆ ಡ್ಯಾನ್ಸ್ ಮಾಡಿ ಪ್ರಾಣ ಬಿಟ್ಟ ವರ... ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೀತು ಎದೆ ನಡುಗೋ ದುರಂತ! Tragedy wedding, groom death in marriage celebration, groom death in marriage celebration at Nizamabad, Nizamabad Tragedy wedding news, ಮದುವೆ ಮನೆಯಲ್ಲಿ ದುರಂತ, ಹೃದಯಾಘಾತದಿಂದ ಮದುಮಗ ಸಾವು, ನಿಜಾಮಾಬಾದ್ನಲ್ಲಿ ಹೃದಯಾಘಾತದಿಂದ ಮದುಮಗ ಸಾವು, ಹೃದಯಾಘಾತದಿಂದ ಮದುಮಗ ಸಾವು ಸುದ್ದಿ,](https://etvbharatimages.akamaized.net/etvbharat/prod-images/768-512-6079953-731-6079953-1581747531278.jpg)
ಅದ್ದೂರಿಯಾಗಿಯೇ ಮದುವೆ ಸಮಾರಂಭ ಮುಗಿದಿತ್ತು. ವಧು - ವರರಿಬ್ಬರೂ ನೂರು ಕಾಲ ಚೆನ್ನಾಗಿರುವಂತೆ ಗುರು-ಹಿರಿಯರು ಆಶೀರ್ವದಿಸಿದ್ದರು. ಆದ್ರೆ ವಿಧಿ ಅವರ ಬಾಳಲ್ಲಿ ಆಟವಾಡಿತು. ತಾಳಿ ಕಟ್ಟಿ ಕೆಲವೇ ಕ್ಷಣಗಳಲ್ಲಿ ವರನಿಗೆ ಹೃದಾಯಾಘತವಾಗಿ ಸಾವನ್ನಪ್ಪಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ಬೋಧನ್ನಲ್ಲಿ ನಡೆದಿದೆ.
ಮದುವೆ ದಿನದ ರಾತ್ರಿ ಬರಾತ್ (ಮದುವೆ ಮೆರವಣಿಗೆ) ನಡೆದಿತ್ತು. ನವ ದಂಪತಿಯಿಬ್ಬರು ಹಾಡೊಂದಕ್ಕೆ ಸಖತ್ ಡ್ಯಾನ್ಸ್ ಕೂಡಾ ಮಾಡಿದ್ದರು. ಕೆಲಹೊತ್ತಿನ ಬಳಿಕ ವರ ಗಣೇಶ್ಗೆ (25) ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವೈದ್ಯರು ಆತ ಬೆಳಗ್ಗೆ ಮುಂಜಾನೇ 2 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಗನನ್ನ ಕಳೆದುಕೊಂಡ ಕುಟುಂಬ ಮತ್ತು ಗಂಡನೊಂದಿಗೆ ಬಾಳಲು ಆಗದ ವಧುವಿನ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.