ನವದೆಹಲಿ:ಮಧ್ಯ ಸೇವಿಸಿ ಬೈಕ್ ಚಾಲನೆ ಮಾಡುತ್ತಿದ್ದ ಯವಕನನ್ನ ತಡೆದು ಪೊಲೀಸರು ದಂಡ ವಿದಿಸಿದ್ದಾರೆ. ಬೈಕ್ ಬೆಲೆಗಿಂತ ಹೆಚ್ಚಿನ ಮೊತ್ತ ದಂಡ ವಿಧಿಸಿದ್ದಾರೆ ಎಂದು ಯುವಕ ತನ್ನ ಬೈಕ್ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ನೂತನ ಮೋಟಾರು ವಾಹನ ಕಾಯ್ದೆ... ಶುಲ್ಕ ಭರಿಸಲಾಗದೆ ಬೈಕ್ ಸುಟ್ಟ ಭೂಪ! - ನವದೆಹಲಿ
ಮಧ್ಯ ಸೇವಿಸಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಟ್ರಾಫಿಕ್ ಪೊಲೀಸರು ವಿಧಿಸಿದ ಭಾರೀ ದಂಡದಿಂದ ಕಂಗಾಲಾಗಿ ಬೈಕ್ ಸುಟ್ಟುಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ದ್ವಿಚಕ್ರ ವಾಹನಕ್ಕೆ ಬೆಂಕಿ
ಮಾಲ್ವಿಯಾ ನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ರಾಕೇಶ್ ಎಂಬ ಯುವಕ ಮಧ್ಯ ಸೇವಿಸಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಯುವಕನ್ನ ತಡೆದ ಪೊಲೀಸರು ಶುಲ್ಕ ವಿದಿಸಿ ಚಲನ್ ಹರಿದಿದ್ದಾರೆ. ಕೂಡಲೆ ರಾಕೇಶ್ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೂಡಲೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರ ಮಾಹಿತಿಯಂತೆ ಬಾರೀ ಶುಲ್ಕಕ್ಕೆ ಹೆದರಿ ಯುವಕ ಬೆಂಕಿ ಹಚ್ಚಿದ್ದಾನೆ ಎದು ಹೇಳಲಾಗಿದ್ದು, ಅಧಿಕೃತವಾಗಿ ತಿಳಿಸಿಲ್ಲ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.