ಹೈದರಾಬಾದ್: ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಕಾಲಿಗೆ ಪ್ಲಾಸ್ಟರ್ ಸುತ್ತಿದ್ದ ವಯಸ್ಕರೊಬ್ಬರನ್ನು ಬೆನ್ನ ಮೇಲೆ ಎತ್ತಿಕೊಂಡು ನೀರಿನಿಂದ ಅವೃತವಾಗಿದ್ದ ರಸ್ತೆ ದಾಟಿಸಿದ ಘಟನೆ ನಡೆದಿದೆ.
ಜಲಾವೃತಗೊಂಡ ರಸ್ತೆ.. ಕಾಲಿಗೆ ಪ್ಲಾಸ್ಟರ್ ಸುತ್ತಿದ್ದ ವಯಸ್ಕನನ್ನು ರಸ್ತೆ ದಾಟಿಸಿದ ಟ್ರಾಫಿಕ್ ಪೊಲೀಸಪ್ಪ..
ಕಳೆದ ಶುಕ್ರವಾರ ಮುತ್ತಿನ ನಗರಿ ಹೈದರಾಬಾದ್ನಾದ್ಯಂತ ಭಾರಿ ಮಳೆ ಸುರಿದಿದೆ. ಈ ನಡುವೆ ನಗರದ ಎಲ್ ಬಿ ನಗರದಲ್ಲಿ ರಸ್ತೆ ದಾಟಲು ಒದ್ದಾಡುತ್ತಿದ್ದ ವೈಯಸ್ಕರೊಬ್ಬರನ್ನು ಖುದ್ದು ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ತಮ್ಮ ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ದಾರೆ.
Traffic police carried a man
ಕಳೆದ ಶುಕ್ರವಾರ ಮುತ್ತಿನ ನಗರಿಯಾದ್ಯಂತ ಭಾರಿ ವರ್ಷಧಾರೆ ಸುರಿದಿದೆ. ಈ ನಡುವೆ ನಗರದ ಎಲ್ ಬಿ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ಹೀಗಾಗಿ ರಸ್ತೆ ದಾಟಲು ಒದ್ದಾಡುತ್ತಿದ್ದ ವೈಯಸ್ಕ ವ್ಯಕ್ತಿಯೊಬ್ಬರನ್ನು ಖುದ್ದು ಟ್ರಾಫಿಕ್ ಪೊಲೀಸ್ ತಮ್ಮ ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ದಾರೆ.
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇನ್ನು ನಗರದಾದ್ಯಂತ ಸುರಿದ ಮಳೆಗೆ ಅಲ್ಲಲ್ಲಿ ಸಣ್ಣ ಪುಟ್ಟ ಅವಾಂತರಗಳು ಸಂಭವಿಸಿದೆ.