ಕೇರಳ : ಸಾಮಾನ್ಯವಾಗಿ ದನಗಳು ಹಾಗು ಮತ್ತಿತರ ಪ್ರಾಣಿಗಳು ಹಿಂಡು ಹಿಂಡಾಗಿ ರಸ್ತೆ ದಾಟುವುದನ್ನು ನೋಡಿದ್ದೇವೆ. ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ ಬಾತುಕೋಳಿಗಳ ದೊಡ್ಡ ಗುಂಪು ರಸ್ತೆ ದಾಟಿರುವ ವಿಡಿಯೋ ನೀವು ನೋಡಲೇ ಬೇಕು. ಅವುಗಳು ಶಿಸ್ತಿನಿಂದ ರಸ್ತೆ ಬದಿಯಲ್ಲಿ ಸಂಚರಿಸುತ್ತಿರುವ ದೃಶ್ಯ ಮನಸೂರೆಗೊಳ್ಳುವಂತಿದೆ! ಅವುಗಳ ರಸ್ತೆ ದಾಟುವಿಕೆಗೆ ಕೆಲಕಾಲ ರಸ್ತೆ ಸಂಚಾರವೂ ಸ್ತಬ್ಧಗೊಂಡಿತು.
ಬಾತುಕೋಳಿಗಳ ಪ್ರವಾಹ! ಹಕ್ಕಿಗಳು ಶಿಸ್ತಿನಿಂದ ರಸ್ತೆ ದಾಟುತ್ತಿದ್ರೆ ಟ್ರಾಫಿಕ್ ಸ್ತಬ್ಧ! - undefined
ಕೇರಳದ ಜನನಿಬಿಡ ರಸ್ತೆಯೊಂದರಲ್ಲಿ ಬಾತುಕೋಳಿಗಳ ಸಾಮೂಹಿಕ ಚಲನೆಯಿಂದಾಗಿ ಸಂಚಾರ ದಟ್ಟಣೆ ಕೆಲಕಾಲ ಸ್ತಬ್ಧಗೊಂಡಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು ಜನಮೆಚ್ಚುಗೆಗೆ ಕಾರಣವಾಗಿದೆ.
ಜನಮನ ಸೆಳೆದ ಬಾತುಕೋಳಿಗಳ ಹಿಂಡು
ಕೇರಳದ ಜನನಿಬಿಡ ರಸ್ತೆಯಲ್ಲಿ ಬಾತುಕೋಳಿಗಳ ಗುಂಪು ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನೂರಾರು ಸಂಖ್ಯೆಯಲ್ಲಿ ಅವು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರೆ ಕೆಲ ಕಾಲ ವಾಹನ ಸಂಚಾರವೇ ನಿಂತು ಬಿಟ್ಟಿದೆ. ಈ ಹಕ್ಕಿಗಳ ಗುಂಪು ರಸ್ತೆ ದಾಟಿದ ಬಳಿಕವೇ ಟ್ರಾಫಿಕ್ ಮೂವ್ ಆಗಿದೆ.
ವೀಡಿಯೊದಲ್ಲಿ ಬಾತುಕೋಳಿಗಳ ಗುಂಪು ರಸ್ತೆ ದಾಟುವ ವೇಳೆ ಶಿಸ್ತು ಕಾಯ್ದುಕೊಂಡಿದ್ದು ಕಾಣುತ್ತದೆ. ರಸ್ತೆ ಬದಿಯಲ್ಲಿ ಹಿಂಡು ಹಿಂಡಾಗಿಕ್ರಮಬದ್ಧವಾಗಿ ನಡೆದು ಸಾಗಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.