ಕರ್ನಾಟಕ

karnataka

ETV Bharat / bharat

LIVE: ಕಾರ್ಮಿಕ ಸಂಘಟನೆಗಳಿಂದ ಇಂದು ಮುಷ್ಕರಕ್ಕೆ ಕರೆ... ರಾಷ್ಟ್ರಾದ್ಯಂತ ಬಂದ್​ಗೆ ಹೇಗಿದೆ ಪ್ರತಿಕ್ರಿಯೆ​ - ರಾಷ್ಟ್ರಾದ್ಯಂತ ಬಂದ್ ಸುದ್ದಿ

A total of 10 central trade unions has claimed that approximately 25 crore people will partake in the nationwide strike to be held on Wednesday. This strike will be held to protest against the "anti-people" policies of the government.

Bharat Bandh
ರಾಷ್ಟ್ರವ್ಯಾಪಿ ಮುಷ್ಕರ

By

Published : Jan 8, 2020, 7:53 AM IST

Updated : Jan 8, 2020, 2:40 PM IST

14:31 January 08

ವಿಕೋಪಕ್ಕೆ ತಿರುಗಿದ ಪ್ರತಿಭಟನಾಕಾರರ ಆಕ್ರೋಶ

ವಿಕೋಪಕ್ಕೆ ತಿರುಗಿದ ಪ್ರತಿಭಟನಾಕಾರರ ಆಕ್ರೋಶ
  • ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವಿಕೋಪಕ್ಕೆ ತಿರುಗಿದ ಪ್ರತಿಭಟನಾಕಾರರ ಆಕ್ರೋಶ
  • ಪೊಲೀಸ್​ ವಾಹನಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
  • ಮಾಲ್ಡಾದ ಸುಜಾಪುರ್​ನಲ್ಲಿ ಘಟನೆ
  • ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಏರ್ಪಟ್ಟ ವಾಗ್ವಾದ
  • ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ ಪೊಲೀಸರು

12:29 January 08

ಪ್ರತಿಭಟನೆ ವೇಳೆ ಎರಡು ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ

  • ತೃಣಮೂಲ ಕಾಂಗ್ರೆಸ್​​ ಹಾಗೂ ಸ್ಟೂಡೆಂಟ್ಸ್​ ಫೆಡರೇಶನ್​ ಆಫ್​ ಇಂಡಿಯಾ(SFI) ಕಾರ್ಯಕರ್ತರ ನಡುವೆ ಹೊಡೆದಾಟ
  • ಪ್ರತಿಭಟನೆ ವೇಳೆ ಕಿತ್ತಾಡಿಕೊಂಡ ಕಾರ್ಯಕರ್ತರು
  • ಪಶ್ಚಿಮ ಬಂಗಾಳದ ಬುರ್ದ್ವಾನ್​ನಲ್ಲಿ ಘಟನೆ

12:18 January 08

ಬಸ್​ಗೆ ಕಲ್ಲೆಸೆದು ಪ್ರತಿಭಟನಾಕಾರರ ಆಕ್ರೋಶ

ಬಸ್​ಗೆ ಕಲ್ಲೆಸದ ಕಿಡಿಗೇಡಿಗಳು
  • ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಪ್ರತಿಭಟನಾಕಾರರ ಆಕ್ರೋಶ
  • ಬಸ್​ಗೆ ಕಲ್ಲೆಸೆದು ತಡೆದ ಪ್ರತಿಭಟನಾಕಾರರು
  • ಪಶ್ಚಿಮ ಬಂಗಾಳದ ಕೂಚ್​ ಬೇಹರ್​ನಲ್ಲಿ ಘಟನೆ
  • ಬಸ್​ ತಡೆದು ಪರಾರಿಯಾದ ಕಿಡಿಗೇಡಿಗಳು

12:06 January 08

ಬಂದ್​ ಇಫೆಕ್ಟ್​, ಅರ್ಧದಲ್ಲೇ ನಿಂತ ದೆಹಲಿ-ಅಮೃತ್​ಸರ ರೈಲು

ಅರ್ಧದಲ್ಲೇ ನಿಂತ ದೆಹಲಿ-ಅಮೃತ್​ಸರ ರೈಲು
  • ರಾಷ್ಟ್ರವ್ಯಾಪಿ ಮುಷ್ಕರದಿಂದ ಅರ್ಧದಲ್ಲೇ ನಿಂತ ದೆಹಲಿ-ಅಮೃತ್​ಸರ ನಡುವಿನ ಶತಾಬ್ಧಿ ಎಕ್ಸ್​ಪ್ರೆಸ್​
  • ಪಂಜಾಬ್​ನ ದೊರಹಾ ರೈಲು ನಿಲ್ದಾಣದಲ್ಲೇ ನಿಂತ ಶತಾಬ್ಧಿ ಎಕ್ಸ್​ಪ್ರೆಸ್​
  • ಹಲವು ಪ್ರಯಾಣಿಕರ ಪರದಾಟ

11:40 January 08

ಬಂದ್​ನಿಂದ ಒಡಿಶಾ ಜನತೆ ಪರದಾಟ

ಬಂದ್​ನಿಂದ ಒಡಿಶಾ ಜನತೆ ಪರದಾಟ
  • ಕಾರ್ಮಿಕ ಸಂಘಟನೆಗಳು ಕರೆ ನಿಡಿರುವ ಬಂದ್​ಗೆ ಒಡಿಶಾದಲ್ಲಿ ಉತ್ತಮ ಸ್ಪಂದನೆ.
  • ಬಂದ್​ನಿಂದಾಗಿ ಜನಜೀವನ ಅಸ್ತವ್ಯಸ್ತ
  • ಹೆಚ್ಚಿನ ಜಿಲ್ಲೆಗಳಲ್ಲಿ ಬಾಗಿಲು ಮುಚ್ಚಿದ ಶಿಕ್ಷಣ ಸಂಸ್ಥೆಗಳು 
  • ಬಸ್​ ಹಾಗೂ ರೈಲು ಸಂಚಾರದಲ್ಲೂ ವ್ಯತ್ಯಯ
  • ರಾಜ್ಯಾದ್ಯಂತ ಬ್ಯಾಂಕ್​ಗಳು ಬಂದ್​
  • ಆಸ್ಪತ್ರೆ, ಮೆಡಿಕಲ್​ನಂತಹ ಅಗತ್ಯ ​ಸೇವೆಗಳು ಎಂದಿನಂತೆ ಮುಂದುವರಿಕೆ

11:21 January 08

ತಿರುವನಂತಪುರಂನಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ

  • ಕೇರಳಕ್ಕೂ ತಟ್ಟಿದ ಬಂದ್​ ಬಿಸಿ 
  • ರಾಜಧಾನಿ ತಿರುವನಂತಪುರಂನಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ
  • ಮೆರವಣಿಗೆಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗಿ

10:56 January 08

ದೇವರ ನಾಡಿಗೂ ತಟ್ಟಿದ ಬಂದ್​ ಬಿಸಿ

ಕೇರಳ ಬಂದ್​...
  • ಕೇರಳಕ್ಕೂ ಬಂದ್​ ಬಿಸಿ ತಟ್ಟಿದೆ.
  • ಕೇರಳದ ಪ್ರಮುಖ ನಗರ ಕೊಚ್ಚಿಯಲ್ಲಿ ವಾಹನ ಸಂಚಾರ ಸ್ತಬ್ಧ.
  • ಹಲವು ಬಸ್​ಗಳು ಸಂಚರಿಸದೆ ಪ್ರಯಾಣಿಕರ ಪರದಾಟ. 
  • ಬಸ್​ ನಿಲ್ದಾಣಗಳಲ್ಲೇ ಉಳಿದುಕೊಂಡ ಬಸ್​ಗಳು, ಪ್ರಯಾಣಿಕರು.
  • ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ರಸ್ತೆ

10:45 January 08

ಪಂಜಾಬಿ ಯುನಿವರ್ಸಿಟಿಯ ಮುಖ್ಯ ಗೇಟ್​ ಮುಚ್ಚಿ ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ
  • ಪಂಜಾಬ್​ಗೂ ತಟ್ಟಿದ ಪ್ರತಿಭಟನೆ ಬಿಸಿ
  • ಪಂಜಾಬಿ ಯುನಿವರ್ಸಿಟಿಯ ಪ್ರಮುಖ ಗೇಟ್​ಗಳನ್ನು ಮುಚ್ಚಿ ವಿದ್ಯಾರ್ಥಿಗಳ ಪ್ರತಿಭಟನೆ
  • ಪಂಜಾಬ್​ನ ಪಟಿಯಾಲದಲ್ಲಿರುವ ವಿವಿ
  • ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ಬೆಂಬಲ

10:35 January 08

ಚೆನ್ನೈನಲ್ಲೂ ಪ್ರತಿಭಟನೆ

ಚೆನ್ನೈನಲ್ಲಿ ಪ್ರತಿಭಟನೆ
  • ಚೆನ್ನೈನ ಮೌಂಟ್​ ರಸ್ತೆಯಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. 
  • ಪ್ರತಿಭಟನೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗಿಯಾದರು.

09:44 January 08

ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ
  • ಬಂದ್​ ಪ್ರಭಾವ ವಾಣಿಜ್ಯ ನಗರಿ ಮುಂಬೈಗೂ ತಟ್ಟಿದೆ. 
  • ನಗರದ ಅಂಬಜೋಗೈ ರಸ್ತೆಯಲ್ಲಿ ರೈತ ಸಂಘಟನೆಗಳು ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡಡೆಸಿದ್ದಾರೆ.

08:49 January 08

ಹೆಲ್ಮೆಟ್​ ಧರಿಸಿಕೊಂಡು ಬಸ್​ ಚಾಲನೆ

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪ್ರತಿಭಟನೆ ಭೀತಿಯಿಂದ ಎಚ್ಚೆತ್ತುಕೊಂಡ ಎನ್​ಬಿಎಸ್​ಟಿಸಿ ಬಸ್​ ಚಾಲಕನೋರ್ವ ಹೆಲ್ಮೆಟ್​ ಧರಿಸಿಕೊಂಡು ಬಸ್​ ಚಲಾಯಿಸಿದ್ದಾನೆ. 

08:01 January 08

ಕೋಲ್ಕತ್ತಾದಲ್ಲಿ ರೈಲು ತಡೆದು ಪ್ರತಿಭಟನೆ

ರೈಲು ತಡೆದು ಪ್ರತಿಭಟನೆ
  • ಪಶ್ಚಿಮ ಬಂಗಾಳದ ಹೌರಾದಲ್ಲಿ ಪ್ರತಿಭಟನಾಕಾರರು ರೈಲನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
  • ಈ ವೇಳೆ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 
  • ಕಂಚ್ರಾಪರದಲ್ಲೂ ರೈಲನ್ನು ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

07:30 January 08

ರಾಷ್ಟ್ರಾದ್ಯಂತ ಬಂದ್​ಗೆ ಹೇಗಿದೆ ಪ್ರತಿಕ್ರಿಯೆ​

ನವದೆಹಲಿ:ಹಲವು ಕೆಂದ್ರೀಯ ಕಾರ್ಮಿಕ ಸಂಘಟನೆಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರದ ಜನವಿರೋಧಿ ನೀತಿ ವಿರೋಧಿಸಿ ಸುಮಾರು 10 ಕಾರ್ಮಿಕ ಸಂಘಟನೆಗಳು ಇಂದು ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. 

ಕಾರ್ಮಿಕ ಸಂಘಟನೆಗಳಾದ INTUC, AITUC, HMS, CITU, AIUTUC, TUCC, SEWA, AICCTU, LPF, UTUC ಮೊದಲಾದ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಸುಮಾರು 25 ಕೋಟಿ ಜನರು ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. 

Last Updated : Jan 8, 2020, 2:40 PM IST

ABOUT THE AUTHOR

...view details