ನವದೆಹಲಿ :ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 131ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನೆಹರು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಜವಾಹರಲಾಲ್ ನೆಹರು ಜನ್ಮ ದಿನಾಚರಣೆ.. ಮುತ್ತಾತನ ಸಮಾಧಿಗೆ ರಾಹುಲ್ ಗಾಂಧಿ ಪುಷ್ಪ ನಮನ - ಜವಾಹರಲಾಲ್ ನೆಹರೂ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ರಾಗಾ
ಸಹೋದರತ್ವ, ಸಮತಾವಾದ ಮತ್ತು ಆಧುನಿಕ ದೃಷ್ಟಿಕೋನದ ಮೌಲ್ಯಗಳೊಂದಿಗೆ ನಮ್ಮ ದೇಶದ ಅಡಿಪಾಯ ಹಾಕಿದ ಅತ್ಯುನ್ನತ ದಾರ್ಶನಿಕ..
ಪುಷ್ಪ ನಮನ ಸಲ್ಲಿಸಿದ ರಾಹುಲ್ ಗಾಂಧಿ
ಇಂದು ಭಾರತವು ತನ್ನ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜಿ ಅವರ ಜನ್ಮ ದಿನಾಚರಣೆ ಆಚರಿಸುತ್ತಿದೆ. ಸಹೋದರತ್ವ, ಸಮತಾವಾದ ಮತ್ತು ಆಧುನಿಕ ದೃಷ್ಟಿಕೋನದ ಮೌಲ್ಯಗಳೊಂದಿಗೆ ನಮ್ಮ ದೇಶದ ಅಡಿಪಾಯವನ್ನು ಹಾಕಿದ ಅತ್ಯುನ್ನತ ದಾರ್ಶನಿಕ ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ತಮ್ಮ ಮುತ್ತಜ್ಜನ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.