ಸಿಕ್ಕಿಂ:ಪೂರ್ವ ಸಿಕ್ಕಿಂ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಇಲ್ಲಿನ ನಾಥು ಲಾ ಪ್ರದೇಶದ ಬಳಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ಧ 1,500 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಪೂರ್ವ ಸಿಕ್ಕಿಂನಲ್ಲಿ ಭಾರಿ ಹಿಮಪಾತ: 1,500 ಪ್ರವಾಸಿಗರ ರಕ್ಷಣೆ - ನಾಥು ಲಾ ದಲ್ಲಿ ಹಿಮದಲ್ಲಿ ಸಿಲುಕಿದ್ಧ 1500 ಪ್ರವಾಸಿಗರ ರಕ್ಷಣೆ
ಪೂರ್ವ ಸಿಕ್ಕಿಂ ಜಿಲ್ಲೆಯ ನಾಥು ಲಾ ಪ್ರದೇಶದ ಬಳಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ಧ 1,500 ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಪೂರ್ವ ಸಿಕ್ಕಿಂನಲ್ಲಿ ಭಾರಿ ಹಿಮಪಾತ
ಚೀನಾ ಗಡಿ ಬಳಿ ಇರುವ ನಾಥು ಲಾ, ಒಂದು ಪರ್ವತ ಮಾರ್ಗವಾಗಿದ್ದು, ಸಮುದ್ರ ಮಟ್ಟಕ್ಕಿಂತ ಸರಾಸರಿ 14,140 ಅಡಿ ಎತ್ತರದಲ್ಲಿದೆ. ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಯಾವಾಗಲೂ ಅಧಿಕವಾಗಿರುತ್ತದೆ. ಈ ಬಾರಿ ಇಲ್ಲಿ ಹಿಮಪಾತದ ಪ್ರಮಾಣ ಕೂಡ ಅಧಿಕವಾಗಿದ್ದು, ಇಲ್ಲಿ ಸಿಲುಕಿಕೊಂಡಿದ್ದ 1500 ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.