ನವದೆಹಲಿ: ಕೋವಿಡ್ -19 ಭೀತಿಯನ್ನು ನಿಭಾಯಿಸಲು ಕಾರ್ಮಿಕರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ಬೆನ್ನಲ್ಲೆ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಅವರ ಮಗ ಭೋಪಾಲ್ನಲ್ಲಿ ಸ್ವಯಂ ಪ್ರೇರಣೆಯಿಂದ ರಸ್ತೆಗಳ ಸ್ವಚ್ಚತೆಗೊಳಿಸಿದ್ದಾರೆ.
ಪಟೇಲ್ ಹಾಗೂ ಅವರ ಪುತ್ರ ಪ್ರಭಾಲ್ ಸಿಂಗ್ ಪಟೇಲ್ ಪೌರ ಕಾರ್ಮಿಕರ ಕೊರತೆಯಿದೆ ಎಂದು ಅರಿತುಕೊಂಡ ಕಾರ್ಮಿಕರಿಗೆ ಸಹಕಾರ ನೀಡಲು ನಿರ್ಧರಿಸಿದರು. ನಿವಾಸಿಗಳು ಮತ್ತು ಪೌರ ಕಾರ್ಮಿಕ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಹ ಚರ್ಚೆ ನಡೆಸಿದ್ದಾರೆ.
ಇನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊವೊಂದರಲ್ಲಿ, ಪಟೇಲ್ ಮತ್ತು ಅವರ ಮಗ ಫಾಗಿಂಗ್ ಯಂತ್ರವನ್ನು ಹೊತ್ತುಕೊಂಡು ಮಧ್ಯಪ್ರದೇಶದ ರಾಜಧಾನಿಯಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಪ್ರವೇಶ ದ್ವಾರಗಳನ್ನು ಸ್ವಚ್ಚ ಗೊಳಿಸುತ್ತಿದ್ದಾರೆ.