ಕರ್ನಾಟಕ

karnataka

ETV Bharat / bharat

ಸಿಹಿಸುದ್ದಿ: ದೇಶದಲ್ಲಿ 90 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖ

ಭಾರತದಲ್ಲಿ ಕೋವಿಡ್​​ ಗುಣಮುಖರ ಪ್ರಮಾಣ ಶೇ.94.20ಕ್ಕೆ ಏರಿಕೆಯಾಗಿದ್ದು, ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.4.35ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್​ ಮಾಡಿದೆ.

Total number of corona cases and deaths in India
ಭಾರತದಲ್ಲಿ 90 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖ

By

Published : Dec 4, 2020, 10:19 AM IST

ನವದೆಹಲಿ: ದೇಶದಲ್ಲಿ 90,16,289 ಮಂದಿ ಮಹಾಮಾರಿ ಕೊರೊನಾದಿಂದ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ.94.20ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ.1.45ಕ್ಕೆ ಇಳಿಕೆಯಾಗಿದ್ದು, ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ.

ಭಾರತದ ಕೊರೊನಾ ಹೋರಾಟ

ಕಳೆದ 24 ಗಂಟೆಗಳಲ್ಲಿ 36,594 ಸೋಂಕಿತರು ಪತ್ತೆಯಾಗಿದ್ದು, 540 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 95,71,559 ಹಾಗೂ ಮೃತರ ಸಂಖ್ಯೆ 1,39,188ಕ್ಕೆ ಏರಿಕೆಯಾಗಿದೆ. ಆದರೆ ಶೇ.4.35 ರಷ್ಟು (4,16,082) ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಡಿಸೆಂಬರ್​​​ 3ರ ವರೆಗೆ 14,47,27,749 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,70,102 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details