ನವದೆಹಲಿ: ಭಾರತದ ಕೋವಿಡ್ ಹೋರಾಟ ವಿಜಯದೆಡೆ ಸಾಗುತ್ತಿದೆ. 78 ಲಕ್ಷ ಸೋಂಕಿತರ ಪೈಕಿ 70 ಲಕ್ಷಕ್ಕೂ ಹೆಚ್ಚು ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಆ್ಯಕ್ಟಿವ್ ಕೇಸ್ಗಳು 7 ಲಕ್ಷ ಗಡಿಯಿಂದ ಕೆಳಗಿಳಿದಿದೆ.
ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಕೂಡ ದಿನೇ ದಿನೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 53,370 ಸೋಂಕಿತರು ಪತ್ತೆಯಾಗಿದ್ದು, 650 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 78,14,682 ಹಾಗೂ ಮೃತರ ಸಂಖ್ಯೆ 1,17,956ಕ್ಕೆ ಏರಿಕೆಯಾಗಿದೆ.