ನವದೆಹಲಿ: "ಭಾರತ ಕೋವಿಡ್-19 ವಿರುದ್ಧ ಹೋರಾಡುತ್ತಿದೆ. ಬನ್ನಿ ಎಲ್ಲರೂ ಒಗ್ಗೂಡಿ ಈ ಹೋರಾಟ ಎದುರಿಸೋಣ. ಕೊರೊನಾಗೆ ಔಷಧಿ ಅಥವಾ ಲಸಿಕೆ ಸಿಗುವವರೆಗೂ ನಿರ್ಲಕ್ಷ್ಯ ಮಾಡಬೇಡಿ. ಎಲ್ಲೆಡೆ ಕೋವಿಡ್ ನಿಯಮಗಳನ್ನು ಅನುಸರಿಸಿ ಮತ್ತು ಇತರರು ಸಹ ಅನುಸರಿಸಲು ಪ್ರೋತ್ಸಾಹಿಸಿ. ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರವಿರಲಿ. ಮಾಸ್ಕ್ ಮರೆಯದಿರಿ" ಎಂದು ಮತ್ತೆ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಕಳೆದ 24 ಗಂಟೆಗಳಲ್ಲಿ 54,366 ಸೋಂಕಿತರು ಪತ್ತೆಯಾಗಿದ್ದು, 690 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 77,61,312 ಹಾಗೂ ಮೃತರ ಸಂಖ್ಯೆ 1,17,306ಕ್ಕೆ ಏರಿಕೆಯಾಗಿದೆ.