ಗಾಂಧಿನಗರ (ಗುಜರಾತ್): ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗುಜರಾತ್ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ. ಈಗ ಮತ್ತಿಬ್ಬರು ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ನ ಶಾಸಕ ಸ್ಥಾನಕ್ಕೆ ಒಟ್ಟು 8 ಮಂದಿ ಈವರೆಗೆ ಗುಡ್ ಬೈ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆ ಸನಿಹದಲ್ಲೇ 'ಕೈ'ಯಲ್ಲಿ ಅಸಮಾಧಾನ ಸ್ಫೋಟ: ಈವರೆಗೆ 8 ಶಾಸಕರು ಗುಡ್ಬೈ - ಬಿಜೆಪಿ
ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗುಜರಾತ್ ಕಾಂಗ್ರೆಸ್ನಲ್ಲಿ ಭಿನ್ನಮತ ಶುರುವಾಗಿದೆ. ಈ ತಿಂಗಳಲ್ಲಿ ಮೂವರು ಶಾಸಕರ ರಾಜೀನಾಮೆ ಅಂಗೀಕಾರವಾಗಿದ್ದು, ಕಾಂಗ್ರೆಸ್ ಬಿಟ್ಟ ಶಾಸಕರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಕಾಂಗ್ರೆಸ್ ಶಾಸಕರು
ಮೊರ್ಬಿ ಶಾಸಕ ಬ್ರಿಜೇಶ್ ಮೆರ್ಜಾಗೂ ನಂತರ ಮತ್ತಿಬ್ಬರು ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದರು. ಇದೇ ವರ್ಷದ ಮಾರ್ಚ್ನಲ್ಲಿ ಪ್ರವೀಣ್ ಮರು, ಮಂಗಳ್ ಗೋವಿತ್, ಸೋಮಬಾಯ್ ಪಟೇಲ್, ಜೆ.ವಿ. ಕಕಾಡಿಯಾ, ಪ್ರದ್ಯುಮ್ನ ಜಡೇಜಾ ರಾಜೀನಾಮೆ ನೀಡಿದ್ದರು.
ಇದಾದ ನಂತರ ಗುರುವಾರವಷ್ಟೇ ಶಾಸಕರಾದ ಅಕ್ಷಯ್ ಪಟೇಲ್ ಹಾಗೂ ಜೀತು ಚೌಧರಿ ರಾಜೀನಾಮೆ ನೀಡಿದ್ದರು. ಶುಕ್ರವಾರ ಬ್ರಿಜೇರ್ಶ್ ಮೆರ್ಜಾ ರಾಜೀನಾಮೆ ಸಲ್ಲಿಸಿದ್ದು, ಎಲ್ಲರ ರಾಜೀನಾಮೆ ಪತ್ರಗಳು ಅಂಗೀಕಾರವಾಗಿವೆ. ಇದರಿಂದ ಗುಜರಾತ್ನಲ್ಲಿ ರಾಜೀನಾಮೆ ನೀಡಿದ ಕಾಂಗ್ರೆಸ್ಸಿಗರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.