ಕೇರಳ: ಈಗಾಗಲೇ ಕೇರಳದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,826 ಶಂಕಿತ ಪ್ರಕರಣಗಳು ವರದಿಯಾಗಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್: ಕೇರಳದಲ್ಲಿ 2,826 ಶಂಕಿತ ಪ್ರಕರಣಗಳು ವರದಿ - suspected Coronavirus cases in Kerala
ಕೇರಳದಲ್ಲಿ ಒಟ್ಟು 2,826 ಶಂಕಿತ ಪ್ರಕರಣಗಳು ವರದಿಯಾಗಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.

ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ
ಈ ಪೈಕಿ 2,743 ಜನರನ್ನು ಮನೆಗಳಲ್ಲಿ ಹಾಗೂ 83 ಜನರನ್ನು ಅಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಶಂಕಿತ ಪ್ರಕರಣಗಳ ಪೈಕಿ 263 ಸ್ಯಾಂಪಲ್ಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ ಪರೀಕ್ಷೆಗೆ ಒಳಗಾದ 229 ಸ್ಯಾಂಪಲ್ಗಳ ಫಲಿತಾಂಶ ನೆಗೆಟಿವ್ ಇದೆ ಎಂದು ಸಚಿವರು ತಿಳಿಸಿದ್ದಾರೆ.