ಔರಂಗಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನಿಂದ 25 ಕಿ.ಮೀ. ದೂರದಲ್ಲಿ ಇರುವ ಗಡಿವತ್ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕವಿಲ್ಲ. ಅಗತ್ಯ ಮೂಲಸೌಕರ್ಯಗಳೂ ಇಲ್ಲ. ಆದ್ರೂ ಈ ಗ್ರಾಮದ ಮಕ್ಕಳು ಇಂಟರ್‌ನೆಟ್ ಸಂಪರ್ಕದ ಮೂಲಕ ಜಪಾನಿ ಭಾಷೆ ಕಲಿಯುತ್ತಿದ್ದಾರೆ.
ಜಿಲ್ಲಾ ಪರಿಷತ್ ನಡೆಸಿಕೊಂಡು ಬರುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳಿಗೆ ಜಪಾನಿ ಭಾಷೆಯ ಪುಸ್ತಕಗಳ ಅಭಾವ ಕಂಡುಬಂದಿತ್ತು. ಸಾವಿರಾರು ಕಿ.ಮೀ. ದೂರದ ಸೂರ್ಯೋದಯದ ನಾಡು ಜಪಾನ್ ನೇರವಾಗಿ ಸಹಾಯಸ್ತ ಚಾಚಿದೆ. ಟೋಕಿಯೊ ಮೂಲದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಜಪಾನಿ ಭಾಷೆಯನ್ನು ಉತ್ತಮ ರೀತಿಯಲ್ಲಿ ಕಲಿಯಂತೆ ನೆರವಾಗಲು ಹಲವು ಪುಸ್ತಕಗಳನ್ನು ಕಳುಹಿಸಿದ್ದಾರೆ.
ಸ್ಥಳೀಯ ಆಡಳಿತ ನಡೆಸುವ ಶಾಲೆಯ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಜಪಾನೀಸ್ ಭಾಷೆಯನ್ನು ಕಲಿಯಲು ಪ್ರಾರಂಭಿಸಿದ್ದಾರೆ. ಜೊತೆಗೆ ಈ ವಿದೇಶಿ ಭಾಷೆಯನ್ನು ಸಹ ಮಾತನಾಡುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶಾಲೆಯು ವಿದೇಶಿ ಭಾಷಾ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿತ್ತು. ಅದರ ಅಡಿಯಲ್ಲಿ 4 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿಯಲು ಬಯಸುವ ಭಾಷೆಯನ್ನು ಆಯ್ಕೆ ಮಾಡಲು ಕೇಳಲಾಯಿತು. ರೊಬೊಟಿಕ್ಸ್ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದರಿಂದ ಅವರಲ್ಲಿ ಹೆಚ್ಚಿನವರು ಜಪಾನೀಸ್ ಭಾಷೆಯನ್ನು ಆರಿಸಿಕೊಂಡರು. ಆನ್‌ಲೈನ್ ಮುಖಾಂತರ 70 ವಿದ್ಯಾರ್ಥಿಗಳು ಜಪಾನಿ ಭಾಷೆಯನ್ನು ಕಲಿಯುತ್ತಿದ್ದಾರೆ.
ಜಿಲ್ಲಾ ಪರಿಷತ್ತಿನ ಶಿಕ್ಷಣ ವಿಸ್ತರಣಾ ಅಧಿಕಾರಿ ರಮೇಶ್ ಠಾಕೂರ್ ಪಿಟಿಐ ಜೊತೆ ಮಾತನಾಡಿ, ಕಳೆದ 25 ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಜಪಾನಿ ಭಾಷೆ ಮತ್ತು ಭಾಷಾಶಾಸ್ತ್ರದ ಪ್ರಶಾಂತ್ ಪರೇಶಿ ಎಂಬ ಪ್ರಾಧ್ಯಾಪಕರು ಮಕ್ಕಳಿಗೆ ಅಂತಾರಾಷ್ಟ್ರೀಯ ಭಾಷೆ ಕಲಿಸುತ್ತಿದ್ದಾರೆ. ಮಕ್ಕಳು ಸಹ ವಿದೇಶಿ ಭಾಷೆಯನ್ನು ಉತ್ತಮ ರೀತಿಯಲ್ಲಿ ಕಲಿಯಲು ಆರಂಭಿಸಿದ್ದಾರೆ ಎಂದರು.
ಜಪಾನ್ ಮೂಲದ ಪ್ರಾಧ್ಯಾಪಕರು ನನ್ನಿಂದ ಯೋಜನೆಯ ವಿವರಗಳನ್ನು ದೂರವಾಣಿ ಮೂಲಕ ತೆಗೆದುಕೊಂಡು ಮರಾಠಿ ಮತ್ತು ಜಪಾನಿ ಭಾಷೆಗಳ ಆರು ಸೆಟ್ ಪುಸ್ತಕಗಳನ್ನು ಕಳುಹಿಸಿದರು. ನಾವು ಜಪಾನಿ-ಮರಾಠಿ ನಿಘಂಟು ಅನುವಾದಿಸಿದ ಕಥೆ ಪುಸ್ತಕಗಳು ಮತ್ತು ವ್ಯಾಕರಣ ಮತ್ತು ಇತರ ಪಠ್ಯಗಳ ಪುಸ್ತಕಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.