ನವದೆಹಲಿ: 2019ರ ಕಡೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೊದಿ, ಇಂದಿನ ಯುವಕರು, ಜಾತಿವಾದ, ಸ್ವಜನಪಕ್ಷಪಾತ, ತಾರತಮ್ಯವನ್ನು ಒಪ್ಪಬೇಡಿ ಎಂದು ಮೋದಿ ಕರೆ ನೀಡಿದ್ದಾರೆ.
ದೇಶದ ಜನತೆಗೆ ಹೊಸ ವರ್ಷದ ಶುಭ ಕೋರಿದ ಮೋದಿ, ಕೇವಲ ಮೂರು ದಿನಗಳ ಅವಧಿಯಲ್ಲಿ, 2019ಕ್ಕೆ ವಿದಾಯ ಹೇಳುವುದು ಮಾತ್ರವಲ್ಲ, ನಾವು 21 ನೇ ಶತಮಾನದ ಮೂರನೇ ದಶಕಕ್ಕೆ ಕಾಲಿಡುತ್ತಿದ್ದೇವೆ ಎಂದು ಎಚ್ಚರಿಸಿದರು.
ಯುವಕರ ಮೇಲೆ ಭಾರತ ಅನೇಕ ನಿರೀಕ್ಷೆ ಇಟ್ಟುಕೊಂಡಿದೆ. ಏಕೆಂದರೆ ಯುವಕರೇ ಈ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವವರು. ಶಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಯುವಕರಿಗೆ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬರುವ ದಶಕದಲ್ಲಿ ಯುವ ಭಾರತ ಪ್ರಮುಖ ಪಾತ್ರವಹಿಸಲಿದೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ ಮತ್ತು ವ್ಯಾಪಕವಾದ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಒಂದು ದೊಡ್ಡ ವಿಷಯ ಎಂದು ನಾನು ಪರಿಗಣಿಸುತ್ತೇನೆ. ಬರುವ ದಶಕದಲ್ಲಿ ಯುವಕರ ಅಭಿವೃದ್ಧಿ ಮಾತ್ರವಲ್ಲ ದೇಶದ ಅಭಿವೃದ್ದಿಯಲ್ಲೂ ಯುವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಯುವಜನತೆ ಕುರಿತು ಮೋದಿ ಮಾತನಾಡಿದ್ದಾರೆ.