ಕರ್ನಾಟಕ

karnataka

ETV Bharat / bharat

‘ಅಪ್ಪ ಐ ಲವ್ ಯು... ಪಾ’... : ಇಂದು ವಿಶ್ವ ಅಪ್ಪಂದಿರ ದಿನಾಚರಣೆ - ಇಂದು ವಿಶ್ವ ಅಪ್ಪಂದಿರ ದಿನಾಚರಣೆ ಸುದ್ದಿ

‘ನಾನು ನೋಡಿದ ಮೊದಲ ವೀರ.. ಬಾಳು ಕಲಿಸಿದ ಸಲಹೆಗಾರ.. ಬೆರಗು ಮೂಡಿಸೋ ಜಾದುಗಾರ ಅಪ್ಪ.. ಹಗಲು ಬೆವರಿನ ಕೂಲಿಕಾರ.. ರಾತ್ರಿ ಮನೆಯಲ್ಲಿ ಚೌಕಿದಾರ.. ಎಲ್ಲ ಕೊಡಿಸುವ ಸಾಹುಕಾರ ಅಪ್ಪ’... ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ನಿಜಕ್ಕೂ ಸತ್ಯ. ಇಂದು ವಿಶ್ವ ಅಪ್ಪಂದಿರ ದಿನಾಚರಣೆ ಹಿನ್ನೆಲೆ ಅದೆಷ್ಟೊ ಮಕ್ಕಳು ತಮ್ಮ ತಂದೆಗೆ ಪ್ರೀತಿಯ ಉಡುಗೊರೆ ನೀಡಿ ತಂದೆ ದಿನ ಆಚರಿಸಲಿದ್ದಾರೆ.

World Fathers day, celebration of World Fathers day, celebration of World Fathers day news, ವಿಶ್ವ ಅಪ್ಪಂದಿರ ದಿನಾಚರಣೆ, ಇಂದು ವಿಶ್ವ ಅಪ್ಪಂದಿರ ದಿನಾಚರಣೆ, ಇಂದು ವಿಶ್ವ ಅಪ್ಪಂದಿರ ದಿನಾಚರಣೆ ಸುದ್ದಿ,
ಇಂದು ವಿಶ್ವ ಅಪ್ಪಂದಿರ ದಿನಾಚರಣೆ

By

Published : Jun 21, 2020, 7:26 AM IST

ಇಂದು ಅತ್ತಾಗ ಅಪ್ಪಿಕೊಂಡು, ಎತ್ತಿಕೊಂಡು ಮುದ್ದಿಸಿ, ಬೆಳೆಯುವಾಗ ಬೆನ್ನೆಲುಬಾಗಿ ಪ್ರೋತ್ಸಾಹಿಸಿದ ತಂದೆಯನ್ನು ನೆನೆಯುವ ದಿನ. ಅಂದರೆ ಅಪ್ಪನ ದಿನ ಅಂದರೆ ವಿಶ್ವ ಅಪ್ಪಂದಿರ ದಿನ..

ತಾಯಿ ಪ್ರೀತಿಯನ್ನು ನೀಡಿದರೆ, ತಂದೆ ಸ್ನೇಹ, ಅಕ್ಕರೆಯನ್ನು ನೀಡುತ್ತಾನೆ. ಹಾಗಾಗಿ ಜಗತ್ತಿನಾದ್ಯಂತ ಈ ಒಂದು ದಿನವನ್ನು ಅಪ್ಪಂದಿರ ದಿನಾಚರಣೆ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ಪ್ರತಿ ವರ್ಷ ಜೂನ್​​ ತಿಂಗಳಿನ ಮೂರನೇ ವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಜೂನ್​ 21ರಂದು ಫಾದರ್ಸ್​ ಡೇ ಆಚರಿಸಲಾಗುತ್ತಿದೆ.

1910ರಲ್ಲಿ ವಾಷಿಂಗ್ಟನ್​ನಲ್ಲಿ ಮೊದಲ ಬಾರಿಗೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಮೆರಿಕದ ಸಿವಿಲ್​ ವಾರ್​​ನಲ್ಲಿ ಪಾಲ್ಗೊಂಡಿದ್ದ ವಿಲಿಯಂ ಜಾಕ್ಸನ್​​ ಸ್ಮಾರ್ಟ್​ ಅವರ ಮಗಳು ಸೊನೊರಾ ಸ್ಮಾರ್ಟ್​ ಡಾಡ್​​ ತನ್ನ ತಂದೆಯ ಹುಟ್ಟು ಹಬ್ಬವನ್ನು ಮೊದಲು ಬಾರಿಗೆ ಆಚರಿಸಿದರು ಎಂದು ಹೇಳಲಾಗಿದೆ.

ಅಂದಿನಿಂದ ವಿಶ್ವ ಅಪ್ಪಂದಿರ ದಿನವನ್ನು 11 ದೇಶಗಳು ಆಚರಿಸುತ್ತಾ ಬಂದಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನಲ್ಲಿ ಸೆಪ್ಟೆಂಬರ್​ ತಿಂಗಳಿನ ಮೊದಲ ಭಾನುವಾರ ಫಾದರ್ಸ್​ ಡೇ ಆಚರಿಸಲಾಗುತ್ತದೆ. ಬ್ರೆಜಿಲ್​ನಲ್ಲಿ ಆಗಸ್ಟ್​ ಎರಡನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.

ABOUT THE AUTHOR

...view details