ನವದೆಹಲಿ: ಕಳೆದ ಏಳು ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ ಬಾಬರಿ ಮಸೀದಿ ಭೂಮಿ ವಿವಾದ ವಿಚಾರಣೆ ಇಂದು ಕೊನೆಗೊಳ್ಳಲಿದೆ. ರಾಜಕೀಯ ಸೂಕ್ಷ್ಮವಾದ ಪ್ರಕರಣದ ವಿಚಾರಣೆಯನ್ನು ಬುಧವಾರ (ಇಂದು) ಮುಕ್ತಾಯಗೊಳಿಸಲು ಎದುರು ನೋಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ನಿನ್ನೆ ತಿಳಿಸಿತ್ತು.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಬಗ್ಗೆ ಕಳೆದ 39 ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದಗಳಿಗೆ ತೆರೆ ಎಳೆಯಲು ಗಡುವು ನಿಗದಿಪಡಿಸಿತ್ತು. ನಂತರ ಅಕ್ಟೋಬರ್ 17ಕ್ಕೆ ವಿಚಾರಣೆ ಅಂತ್ಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸಿಜೆಐ ಎಲ್ಲಾ ವಾದ-ಪ್ರತಿವಾದಗಳನ್ನು ಬುಧವಾರ ಸಂಜೆ 5 ಗಂಟೆಯೊಳಗೆ ಮುಗಿಸಬೇಕು ಎಂದು ಸೂಚಿಸಿದರು.