- ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 1992ರ ಡಿಸೆಂಬರ್ 6ರಂದು ನಡೆದಿದ್ದ ಘಟನೆ ವಿಚಾರವಾಗಿ ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಕುಮಾರ್ ಯಾದವ್ ಐತಿಹಾಸಿಕ ತೀರ್ಪು ಪ್ರಕಟಿಸಿದರು.
- ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಿಜೆಪಿ ಹಿರಿಯ ನಾಯಕ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
28 ವರ್ಷಗಳ ಬಳಿಕ ತೀರ್ಪು... ಎಲ್ಲಾ ಆರೋಪಿಗಳೂ ದೋಷಮುಕ್ತ... LIVE UPDATES - ಬಾಬ್ರಿ ಮಸೀದಿ ಧ್ವಂಸ ತೀರ್ಪು ಸುದ್ದಿ
12:43 September 30
ಬಿಜೆಪಿ ಹಿರಿಯ ನಾಯಕರಿಗೆ ಬಿಗ್ ರಿಲೀಫ್
12:42 September 30
ಯಾವುದೇ ಸಾಕ್ಷ್ಯ ಇಲ್ಲ: ಕೋರ್ಟ್
- 'ವಿಹೆಚ್ಪಿ ನಾಯಕ ಅಶೋಕ್ ಸಿಂಘಾಲ್ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಫೋಟೊ, ವಿಡಿಯೋ, ಫೋಟೊಕಾಪಿಗಳ ಮೂಲಕ ನೀಡಿರುವ ಸಾಕ್ಷ್ಯಗಳು ಸಾಬೀತಾಗುವುದಿಲ್ಲ' ಎಂದು ನ್ಯಾ. ಎಸ್.ಕೆ. ಯಾದವ್ ತಮ್ಮ ತೀರ್ಪಿನಲ್ಲಿ ಉಲ್ಲೇಖಸಿದ್ದಾರೆ.
12:24 September 30
ಎಲ್ಲಾ ಆರೋಪಿಗಳೂ ಖುಲಾಸೆ
- ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ದೋಷಮುಕ್ತ
- ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು
- 28 ವರ್ಷಗಳ ನಂತರ ಬಿಜೆಪಿ ಹಿರಿಯ ನಾಯಕರಿಗೆ ಬಿಗ್ ರಿಲೀಫ್
12:18 September 30
ತೀರ್ಪು ಓದಲು ಆರಂಭಿಸಿದ ನ್ಯಾಯಾಧೀಶರು
- ಕೆಲ ಕ್ಷಣಗಳಲ್ಲೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬೀಳಲಿದೆ.
- ನ್ಯಾಯಾಧೀಶರಾದ ಎಸ್.ಕೆ. ಯಾದವ್ ಕೋರ್ಟ್ ರೂಂ ಪ್ರವೇಶಿಸಿದ್ದಾರೆ. ಈಗ ಕೋರ್ಟ್ ಕಲಾಪ ಆರಂಭವಾಗಿದೆ. ನ್ಯಾಯಾಧೀಶರು ತೀರ್ಪು ಓದುತ್ತಿದ್ದಾರೆ.
- ಮೊದಲಿಗೆ ಈ ಪ್ರಕರಣದ ಬಗ್ಗೆ ವಿವರ ನೀಡುತ್ತಿದ್ದಾರೆ.
12:11 September 30
ಕೆಲವೇ ಕ್ಷಣಗಳಲ್ಲಿ ಕೋರ್ಟ್ ರೂಂಗೆ ಜಡ್ಜ್
- ಕೆಲವೇ ಕ್ಷಣಗಳಲ್ಲಿ ನ್ಯಾಯಾಧೀಶರಾದ ಸುರೇಂದ್ರ ಕುಮಾರ್ ಯಾದವ್ ಕೋರ್ಟ್ ರೂಂ ತಲುಪಲಿದ್ದಾರೆ. 32 ಆರೋಪಿಗಳ ಪೈಕಿ 26 ಮಂದಿ ಕೋರ್ಟ್ನಲ್ಲಿ ಹಾಜರಿದ್ದಾರೆ.
11:56 September 30
ಟಿವಿ ವೀಕ್ಷಿಸುತ್ತಿರುವ ಎಲ್.ಕೆ. ಅಡ್ವಾಣಿ
- ತೀರ್ಪಿನ ಕುತೂಹಲದಲ್ಲಿರುವ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಮನೆಯಲ್ಲೇ ಕುಳಿತು ಟಿವಿ ವೀಕ್ಷಿಸುತ್ತಿದ್ದಾರೆ.
11:50 September 30
ತೀರ್ಪಿನ ನಂತರ ನಿವೃತ್ತಿಯಾಗಲಿದ್ದಾರೆ ಸಿಬಿಐಯ ವಿಶೇಷ ಜಡ್ಜ್
- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶುಭಾರಂಭದ ಬಳಿಕ ಈಗ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಸಮಯ ಬಂದಿದೆ. ಸಿಬಿಐಯ ವಿಶೇಷ ಜಡ್ಜ್ ಸುರೇಂದ್ರ ಕುಮಾರ್ ಯಾದವ್ ಇವತ್ತು ತೀರ್ಪು ನೀಡಿದ ಬಳಿಕ ನಿವೃತ್ತಿಯಾಗಲಿದ್ದಾರೆ.
11:35 September 30
ಎಲ್ಲರ ಚಿತ್ತ ಸಿಬಿಐ ಕೋರ್ಟ್ನತ್ತ..
ಕೆಲ ಕ್ಷಣಗಳಲ್ಲೇ ಕೋರ್ಟ್ ಕಲಾಪ ಆರಂಭವಾಗಲಿದೆ. ಕೋರ್ಟ್ ರೂಂನಲ್ಲಿ ಜಡ್ಜ್ ಪಕ್ಕದಲ್ಲೇ ಮೊದಲ ಸಾಲಿನಲ್ಲಿ ಸಾಕ್ಷಿ ಮಹಾರಾಜ್, ವೇದಾಂತಿ ಮಹಾರಾಜ್, ವಿನಯ್ ಕಟಿಯಾರ್ ಮತ್ತು ಕೆಲ ಮಂದಿ ಕುಳಿತುಕೊಂಡಿದ್ದಾರೆ. ಜಡ್ಜ್ ತಮ್ಮ ಕಚೇರಿಯಲ್ಲೇ ಇದ್ದಾರೆ. ಕೆಲ ಕ್ಷಣಗಳಲ್ಲೇ ಕೋರ್ಟ್ ಹಾಲ್ಗೆ ಬರಲಿದ್ದಾರೆ.
11:32 September 30
ಆಸ್ಪತ್ರೆಯಲ್ಲಿದ್ದಾರೆ ಕಲ್ಯಾಣ್ ಸಿಂಗ್
ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಗಾಜಿಯಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಕಲ್ಯಾಣ್ ಸಿಂಗ್ ಬಳಲುತ್ತಿದ್ದಾರೆ. ಇವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು, ಬೆಳಗ್ಗಿನಿಂದಲೇ ಟಿವಿ ವೀಕ್ಷಿಸುತ್ತಿದ್ದಾರೆ.
11:21 September 30
6 ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ
- ಎಲ್.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್ ದಾಸ್, ಕಲ್ಯಾಣ್ ಸಿಂಗ್ ಸೇರಿ 6 ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ಕೋರ್ಟ್
11:18 September 30
ನ್ಯಾಯಾಲಯಕ್ಕೆ ಹಾಜರಾದ 26 ಆರೋಪಿಗಳು
ಎಲ್.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್ ದಾಸ್, ಕಲ್ಯಾಣ್ ಸಿಂಗ್ ಹೊರತು ಪಡಿಸಿ ಉಳಿದ ಎಲ್ಲಾ 26 ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದಾರೆ. ಎಲ್.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್ ದಾಸ್, ಕಲ್ಯಾಣ್ ಸಿಂಗ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ.
11:08 September 30
ಕೆಲ ಕ್ಷಣಗಳಲ್ಲೇ ತೀರ್ಪು ಪ್ರಕಟ
- ಸಾಕ್ಷಿ ಮಹಾರಾಜ್ ಕೂಡ ಲಖನೌ ಕೋರ್ಟ್ಗೆ ಆಗಮಿಸಿದ್ದಾರೆ. ಈಗ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದಂತಾಗಿದೆ. ಇವರಲ್ಲಿ ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
11:08 September 30
ಅಡ್ವಾಣಿ, ಜೋಶಿ ಸೇರಿ 6 ಮಂದಿಯಿಂದ ಅರ್ಜಿ
- ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಮಹಾಂತ ನೃತ್ಯಗೋಪಾಲ್ ದಾಸ್ ಸೇರಿ 6 ಮಂದಿ ಕೋರ್ಟ್ಗೆ ಹಾಜರಾಗುವುದಿಲ್ಲ.
- ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಇವರೆಲ್ಲರ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.
11:01 September 30
- ಬಾಬರಿ ಮಸೀದಿ ಪ್ರಕರಣದಲ್ಲಿ ಒಟ್ಟು 49 ಆರೋಪಿಗಳು
- ಪ್ರಕರಣದ ವಿಚಾರಣೆ ಹಂತದಲ್ಲೇ ಸಾವನ್ನಪ್ಪಿದ 17 ಆರೋಪಿಗಳು
- ಉಳಿದ 32 ಮಂದಿಯಲ್ಲಿ 26 ಮಂದಿ ನ್ಯಾಯಾಲಯಕ್ಕೆ ಹಾಜರು
10:58 September 30
- ಲಖನೌ ಸೇರಿದಂತೆ ಯುಪಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
- ತೀರ್ಪು ಪ್ರಕಟ ಹಿನ್ನೆಲೆ ಲಖನೌದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
- ಕೇಲವೇ ಕ್ಷಣಗಳಲ್ಲಿ ಹೊರಬೀಳಲಿರುವ ತೀರ್ಪು
- ಲಖನೌದ ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟವಾಗಲಿರುವ ತೀರ್ಪು
- ಜಸ್ಟೀಸ್ ಸುರೇಂದ್ರ ಯಾದವ್ ನ್ಯಾಯಾಲಯಕ್ಕೆ ಆಗಮನ
10:39 September 30
ಕೋರ್ಟ್ ಒಳಗಡೆ 16 ಕುರ್ಚಿಗಳ ವ್ಯವಸ್ಥೆ
- ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಮತ್ತು ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ತಿಳಿದುಕೊಳ್ಳಲಿದ್ದಾರೆ. ಕೋರ್ಟ್ ಒಳಗಡೆ 16 ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
- ಕೋರ್ಟ್ ತಲುಪಿದ ವಿನಯ್ ಕಟಿಯಾರ್
- ಲಖನೌದ ಸಿಬಿಐ ನ್ಯಾಯಾಲಯಕ್ಕೆ ಆಗಮಿಸಿದ ವಿನಯ್ ಕಟಿಯಾರ್ ಸಾಧ್ವಿ ರಿತಂಬರಾ ಮತ್ತು ಚಂಪತ್ ರಾಯ್
10:33 September 30
32 ಆರೋಪಿಗಳ ಭವಿಷ್ಯ ಇಂದು ನಿರ್ಧಾರ
- ಕೆಲವೇ ಕ್ಷಣಗಳಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ
- ತೀರ್ಪು ಪ್ರಕಟಿಸಲಿರುವ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್
- ನ್ಯಾಯಾಲಯಕ್ಕೆ ಆಗಮಿಸಿದ ಜಡ್ಜ್ ಸುರೇಂದ್ರ ಯಾದವ್
- ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಸಿಎಂ ಉಮಾ ಭಾರತಿ, ಸಾಧ್ವಿ ರಿತಂಬರಾ, ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳ ಭವಿಷ್ಯ ನಿರ್ಧಾರ
- ಲಖನೌದ ಸಿಬಿಐ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ