ಕರ್ನಾಟಕ

karnataka

ETV Bharat / bharat

ಕಣಿವೆ ರಾಜ್ಯಕ್ಕಿಂದು ಅಮಿತ್​ ಶಾ ಭೇಟಿ... ಗವರ್ನರ್​ ಭೇಟಿ ಬಳಿಕ ಅಮರನಾಥ ದರ್ಶನ - undefined

ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಅಲ್ಲಿನ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಜೊತೆ ಮಾತುಕತೆ ನಡೆಸಿ ನಂತರ ಅಮರನಾಥನ ದರ್ಶನ ಪಡೆಯಲಿದ್ದಾರೆ.

ಅಮಿತ್​ ಶಾ

By

Published : Jun 26, 2019, 9:40 AM IST

ಶ್ರೀನಗರ:ಕೇಂದ್ರ ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಅಮಿತ್​​ ಶಾ ಅವರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ.

2 ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಂಡಿರುವ ಅಮಿತ್​ ಶಾ ರಾಜ್ಯಪಾಲ ಸತ್ಯಪಾಲ್​ ಮಲಿಕ್​ರನ್ನು ಭೇಟಿ ಮಾಡಿ ಕಣಿವೆ ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಭದ್ರತಾ ಪಡೆಯ ಅಧಿಕಾರಿಗಳೊಂದಿಗೆ ಉನ್ನತ ಸಭೆ ನಡೆಸಿ ರಕ್ಷಣಾ ವಿಷಯವಾಗಿ ಚರ್ಚೆ ನಡೆಸಲಿದ್ದಾರೆ.

ಕ್ಷೇತ್ರ ಪುನರ್​ ವಿಂಗಡನೆ ಬಗ್ಗೆ ಮಾತುಕತೆ ಸಾಧ್ಯತೆ: ಗೃಹ ಸಚಿವರಾದ ಬಳಿಕ ವಿಧಾನಸಭೆ ಕ್ಷೇತ್ರ ಪುನರ್​ ವಿಂಗಡನೆ ಬಗ್ಗೆ ಸುಳಿವು ನೀಡಿದ್ದರು. ಅಲ್ಲದೆ, 370ನೇ ವಿಧಿಯನ್ನು ರದ್ದುಪಡಿಸುವುದಾಗಿ ಘೋಷಿಸಿದ್ದ ಅವರು ಈ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಅಮರನಾಥ ಯಾತ್ರೆ ಬಗ್ಗೆ ಪರಿಶೀಲನೆ: ಜುಲೈ 1 ರಿಂದ ಆರಂಭಗೊಳ್ಳಲಿರುವ ಅಮರನಾಥ ಯಾತ್ರೆಯ ಸುರಕ್ಷತೆಯ ಬಗ್ಗೆ ಗೃಹ ಸಚಿವ ಶಾ ಪರಿಶೀಲನೆ ನಡೆಸಲಿದ್ದಾರೆ. ಇಂದು ಅಮರನಾಥನ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

For All Latest Updates

TAGGED:

ABOUT THE AUTHOR

...view details