ನವದೆಹಲಿ:ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಎಸ್ ಶ್ರೀಶಾಂತ್, ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ವಿಕೆಟ್ ಕೀಪರ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಆ ಹೇಳಿಕೆಗೆ ಕಾರ್ತಿಕ್ ತಿರುಗೇಟು ನೀಡಿದ್ದಾರೆ.
ಕಾರ್ತಿಕ್ನಿಂದಾಗೇ ಟೀಂ ಇಂಡಿಯಾದಿಂದ ಹೊರಬಿದ್ದೆ ಶ್ರೀಶಾಂತ್ ಅಳಲು: ದಿನೇಶ್ ತಿರುಗೇಟು! - 2013ರ ಚಾಂಪಿಯನ್ ಟ್ರೋಫಿ
ಇಷ್ಟು ದಿನ ಭಾರತೀಯ ಕ್ರಿಕೆಟ್ ಮಂಡಳಿ ವಿರುದ್ಧ ಹರಿಹಾಯುತ್ತಿದ್ದ ವಿವಾದಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಇದೀಗ ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಭಾಗಿಯಾಗಿದ್ದ ಎಸ್ ಶ್ರೀಶಾಂತ್, ತಾವು ಟೀಂ ಇಂಡಿಯಾ ಕ್ರಿಕೆಟ್ ತಂಡದಿಂದ ಹೊರಬಿಳಲು ದಿನೇಶ್ ಕಾರ್ತಿಕ್ ಕಾರಣ ಎಂದು ಹೇಳಿಕೆ ನೀಡಿದ್ದರು. ಸದ್ಯ ಪ್ರತಿಕ್ರಿಯೆ ನೀಡಿರುವ ಕಾರ್ತಿಕ್, ಹೌದು ನಾನು ಅವರ ಹೇಳಿಕೆ ಬಗ್ಗೆ ಕೇಳಿದ್ದೇನೆ. ಆದರೆ, ಆ ರೀತಿಯ ಹೇಳಿಕೆಗಳಿಗೆ ನಾನು ಇದೀಗ ಪ್ರತಿಕ್ರಿಯೆ ನೀಡಿದ್ರೆ ಸಣ್ಣವನಾಗುತ್ತೇನೆ ಎಂದು ಹೇಳಿದ್ದಾರೆ.
ಶ್ರೀಶಾಂತ್ ಹೇಳಿದ್ದೇನು?:ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್ ಶ್ರೀನಿವಾಸ್ ಅವರನ್ನ ನಿಂದಿಸಿದ ಬಗ್ಗೆ ದೂರು ನೀಡಿದ್ದರು. ಹೀಗಾಗಿ 2013ರ ಚಾಂಪಿಯನ್ ಟ್ರೋಪಿ ವೇಳೆ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಅಂತಹ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ರೆ ತಾವು ಸಣ್ಣವನಾಗುವೆ ಎಂದಿದ್ದಾರೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಿದ್ದ ಎಸ್ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಕ್ಕಾಗಿ 7 ವರ್ಷಗಳ ಕಾಲ ಸುಪ್ರೀಂಕೋರ್ಟ್ನಿಂದ ನಿಷೇಧಕ್ಕೊಳಗಾಗಿದ್ದಾರೆ.