ನವದೆಹಲಿ:ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಪ್ರಿಯಾಂಕಾ ಗಾಂಧಿ ಆರೋಪಕ್ಕೆ, ಪೊಲೀಸರು ಅಂಕಿ ಅಂಶಗಳ ಸಮೇತ ಟಾಂಗ್ ನೀಡಿದ್ದಾರೆ.
ಪೂರ್ವ ಯುಪಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ಅಪರಾಧಗಳನ್ನು ಹತ್ತಿಕ್ಕಲು ಸಕ್ರಿಯವಾಗಿ ಹೋರಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲದೆ, ಡಕಾಯಿತಿ, ಕೊಲೆ, ದರೋಡೆ ಹಾಗೂ ಅಪಹರಣಗಳಲ್ಲಿ ಸಾಕಷ್ಟು ಇತ್ಯರ್ಥವಾಗಿವೆ. ಶೇ.20 - 35ರಷ್ಟು ಅಪರಾಧಗಳನ್ನು ಹತ್ತಿಕ್ಕಲಾಗಿದೆ. ಗಂಭೀರ ಪ್ರಕರಣಗಳಲ್ಲಿ 48 ಗಂಟೆಯೊಳಗೆ ಪರಿಹಾರ ಕಂಡುಕೊಳ್ಳಲಾಗ್ತಿದೆ ಎಂದಿದ್ದಾರೆ.
2 ವರ್ಷಗಳಲ್ಲಿ 9,225 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಂಕಿ-ಅಂಶವನ್ನೂ ನೀಡಿದ್ದಾರೆ.
ಟ್ವಿಟ್ಟರ್ ಮೂಲಕ ಪೊಲೀಸರ ಮೇಲೆ ಆರೋಪ ಮಾಡಿದ್ದ ಪ್ರಿಯಾಂಕಾ, ಯುಪಿಯಲ್ಲಿ ಅಪರಾಧಿಗಳು ಆರಾಮಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರ ಅಪರಾಧಿಗಳಿಗೆ ಶರಣಾಗಿದೆ ಎಂದು ಟೀಕಿಸಿದ್ದರು.