ತಂಜಾವೂರು(ತಮಿಳುನಾಡು):ವರದಕ್ಷಿಣೆ ಹಣಕ್ಕಾಗಿ ಅತ್ತೆಯೊಬ್ಬಳು ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೊಸೆ ಸಾವಿಗೀಡಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಏಪ್ರಿಲ್ 4 ರಂದು ತಂಜಾವೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಾದ ಕೆಲವೇ ದಿನಗಳ ನಂತರ, ಅತ್ತೆ ಪುಷ್ಪವಲ್ಲಿ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಸಂಗೀತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಬಡ ಕುಟುಂಬದಿಂದ ಬಂದ ಸಂಗೀತಾ ಎಲ್ಲಾ ದೌರ್ಜನ್ಯಗಳನ್ನು ಸಹಿಸಿಕೊಂಡು ತನ್ನ ಕುಟುಂಬಕ್ಕೆ ಏನನ್ನೂ ಹಂಚಿಕೊಳ್ಳದೆ ಸುಮ್ಮನಾಗಿದ್ದಾಳೆ.