ಚೆನ್ನೈ: ತಮಿಳುನಾಡು ಪಶು ಸಂಗೋಪನಾ ಸಚಿವ ಉದುಮಲೈ ಕೆ. ರಾಧಾಕೃಷ್ಣ ಅವರ ಆಪ್ತ ಸಹಾಯಕ(ಪಿಎ) ಕರ್ಣನ್ ಅವರನ್ನ ಅಪಹರಣ ಮಾಡಿರುವ ಘಟನೆ ನಡೆದಿದೆ.
ಕಚೇರಿಗೆ ನುಗ್ಗಿ ಸಚಿವರ ಪಿಎ ಕಿಡ್ನಾಪ್: ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ! - ಸಚಿವರ ಪಿಎ ಕಿಡ್ನಾಪ್ ಮಾಡಿರುವ ತಂಡ
ಸಚಿವರ ಪಿಎ ಕಿಡ್ನಾಪ್ ಮಾಡಿರುವ ತಂಡ ಆತನ್ನ ಅರ್ದ ಹಾದಿಯಲ್ಲೇ ಬಿಟ್ಟು ಪರಾರಿಯಾಗಿದೆ.
TN Minister's PA kidnapped
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಪಿಎ ಕರ್ಣನ್ ಸಚಿವರ ಕಚೇರಿಯಲ್ಲಿದ್ದ ವೇಳೆ ಕೆಲ ದುಷ್ಕರ್ಮಿಗಳು ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ನಾಲ್ಕು ಮಂದಿ ಕಚೇರಿಯೊಳಗೆ ನುಗ್ಗಿ ಆತನನ್ನ ಹೊರಗಡೆ ತಂದಿದ್ದಾರೆ. ಆತನನ್ನು ಕಾರಿನಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಉದುಮಲೈಪೇಟೆ ಪೊಲೀಸರು ವಿಚಾರಣೆ ನಡೆಸಿ, ಶೋಧಕಾರ್ಯ ಹಮ್ಮಿಕೊಂಡಿದ್ದಾರೆ. ಇದೇ ಭಯದಲ್ಲಿ ಅಪಹರಣಕಾರರು ಆತನನ್ನ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.