ತಮಿಳುನಾಡು:ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಚೆನ್ನೈನಲ್ಲಿ ಜೂನ್ 19 ರಿಂದ 30ರ ವರೆಗೆ ತಮಿಳುನಾಡು ಸರ್ಕಾರ ಮತ್ತೆ ಲಾಕ್ಡೌನ್ ಹೇರಿಕೆ ಮಾಡಿದೆ.
ಚೆನ್ನೈ ಹಾಗೂ ಸುತ್ತಮುತ್ತಲಿನ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ 12 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಪಡಿತರ ಅಂಗಡಿಗಳು ತೆರೆಯುವಂತಿಲ್ಲ. ಅಲ್ಲಿನ ಜನರ ಮನೆಗಳಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಆಸ್ಪತ್ರೆಗಳು, ಲ್ಯಾಬ್ಗಳು, ಆಂಬ್ಯುಲೆನ್ಸ್ ಸೇರಿದಂತೆ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಬಾಡಿಗೆ ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ತುರ್ತು ವೈದ್ಯಕೀಯ ಸಂದರ್ಭವಿದ್ದಲ್ಲಿ ಮಾತ್ರ ಈ ವಾಹನಗಳಿಗೆ ಅನುಮತಿಸಲಾಗುವುದು. ಬೆಳಗ್ಗೆ 6 ರಿಂದ ಮಧ್ಯಾಹ್ಯ 2 ಗಂಟೆಯ ವರೆಗೆ ತರಕಾರಿ, ದಿನಸಿ ಅಂಗಡಿಗಳು, ಪೆಟ್ರೋಲ್ ಬಂಕ್ ತೆರೆಯಲು, ಬೆಳಗ್ಗೆ 6 ರಿಂದ ರಾತ್ರಿ 8ರ ವರೆಗೆ ಹೋಟೆಲ್ನಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಸಮಯ ನಿಗದಿ ಪಡಿಸಲಾಗಿದೆ.
ತಮಿಳುನಾಡಲ್ಲಿ ಈವರೆಗೆ ಒಟ್ಟು 42,687 ಕೋವಿಡ್ ಕೇಸ್ಗಳು ಹಾಗೂ 397 ಸಾವುಗಳು ವರದಿಯಾಗಿದೆ.