ಕರ್ನಾಟಕ

karnataka

ETV Bharat / bharat

ಡಿ.31ರವರೆಗೆ ಲಾಕ್​ಡೌನ್​ ವಿಸ್ತರಣೆ: ಸಿಎಂ ಪಳನಿಸ್ವಾಮಿ ಆದೇಶ - ಸಿಎಂ ಪಳನಿಸ್ವಾಮಿ ಆದೇಶ

ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಅನ್ನು ಡಿಸೆಂಬರ್​.31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ಬಾರಿ ಕೆಲವೊಂದು ವಯಲಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.

ಸಿಎಂ ಪಳನಿಸ್ವಾಮಿ
Chief Minister K. Palaniswami

By

Published : Nov 30, 2020, 12:35 PM IST

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ರಾಜ್ಯದಲ್ಲಿ ಕೋವಿಡ್​-19 ಲಾಕ್​ಡೌನ್​ ಅನ್ನು ಡಿ​.31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಕೊರೊನಾ ಮಾರ್ಗಸೂಚಿ ಅನ್ವಯಿಸಿ ಕಾಲೇಜುಗಳು ಸೇರಿದಂತೆ ಕೆಲವೊಂದು ವಯಲಗಳನ್ನು ಆರಂಭಿಸಿಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಮಹಾಮಾರಿ ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಿದ್ದು, ವೈದ್ಯಕೀಯ, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಂತೆ ಸಿಎಂ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಕೋವಿಡ್​ ವಯಲಗಳನ್ನು ಹೊರತುಪಡಿಸಿ, ಈ ಕೆಳಗಿನ ಸ್ಥಳಗಳಿಗೆ ಕೊರೊನಾ ಮಾರ್ಗಸೂಚಿಗಳು ಅನ್ವಯವಾಗಲಿವೆ:

  • ಎಲ್ಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಂತಿಮ ವರ್ಷದ ಪದವಿ ಪೂರ್ವ ಕೋರ್ಸ್‌ಗಳು ಮತ್ತು ವೈದ್ಯಕೀಯ ಕೋರ್ಸ್‌ಗಳು (ಪದವಿ ಪೂರ್ವ ಮತ್ತು ಸ್ನಾತಕೋತ್ತರ) ಆರಂಭವಾಗಲಿವೆ.
  • ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿಗಳ ತರಗತಿಗಳು ಮಂಗಳವಾರದಿಂದ ಪ್ರಾರಂಭವಾಗಲಿವೆ.
  • ತರಬೇತಿ ಉದ್ದೇಶಗಳಿಗಾಗಿ ಈಜುಕೊಳಗಳನ್ನು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯ ವಿಧಾನಗಳನ್ನು (ಎಸ್‌ಒಪಿ) ಅನುಸರಿಸಲು ಅನುಮತಿಸಲಾಗುತ್ತದೆ.
  • ಕೊರೊನಾ ವೈರಸ್ ಹರಡುವಿಕೆ ಅವಲಂಬಿಸಿ ಡಿ.12 ರಿಂದ ಮರೀನಾ ಮತ್ತು ಇತರ ಕಡಲತೀರಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಕೊಡಲಾಗುವುದು.
  • ಪ್ರದರ್ಶನ ಸಭಾಂಗಣಗಳಿಗೆ ವ್ಯವಹಾರ ಉದ್ದೇಶಗಳಿಗಾಗಿ ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.
  • ಒಳಾಂಗಣ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಸಭೆಗಳಿಗೆ ಕೇವಲ 50 ಪ್ರತಿಶತ ಆಸನ ವ್ಯವಸ್ಥೆ ಕಲ್ಪಿಸಬೇಕು. ಮಂಗಳವಾರದಿಂದ ಡಿ. 31 ರವರೆಗೆ 200 ಜನರನ್ನು ಮೀರಬಾರದು. ಜಿಲ್ಲಾಧಿಕಾರಿಗಳು ಮತ್ತು ಗ್ರೇಟರ್ ಚೆನ್ನೈ ಪೊಲೀಸರಿಂದ ಸಭೆಗಳಿಗೆ ಅನುಮತಿ ಪಡೆಯುವುದು ಅಗತ್ಯ.
  • ಕೊರೊನಾ ವೈರಸ್ ಹರಡುವಿಕೆ ಆಧಾರದ ಮೇಲೆ ಹೊರಾಂಗಣ ಸಭೆಗಳಿಗೆ ಅನುಮತಿ ನೀಡುವ ಕುರಿತು ನಿರ್ಧರಿಸಲಾಗುತ್ತದೆ.
  • ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊರತುಪಡಿಸಿ ಇತರ ರಾಜ್ಯಗಳಿಂದ ತಮಿಳುನಾಡಿಗೆ ಬರುವವರಿಗೆ ಈಗಿರುವ ಇ - ನೋಂದಣಿ ವ್ಯವಸ್ಥೆ ಮುಂದುವರಿಯುತ್ತದೆ.

ABOUT THE AUTHOR

...view details