ಚೆನ್ನೈ(ತಮಿಳುನಾಡು):ಮದ್ಯ ವ್ಯಸನಿ ಯುವಕನೋರ್ವ ಇಲ್ಲಿನ ಕೂವಂ ನದಿಗೆ ಹಾರಿ ಎಲ್ಲರನ್ನು ಆತಂಕಕ್ಕೀಡು ಮಾಡಿದ ಸನ್ನಿವೇಶ ನಡೆದಿದೆ.
ನಶೆಯಲ್ಲಿ ನದಿಗೆ ಹಾರಿದ ಯುವಕ: ರಕ್ಷಿಸಿದಾಗ ನಗು ನಗುತ್ತಲೇ ಹೊರಬಂದ ಭೂಪ! - ಪುದುಪೆಟ್ಟೈ
ಮದ್ಯ ವ್ಯಸನಿ ಯುವಕನೋರ್ವ ಚೆನ್ನೈನ ಕೂವಂ ನದಿಗೆ ಹಾರಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
![ನಶೆಯಲ್ಲಿ ನದಿಗೆ ಹಾರಿದ ಯುವಕ: ರಕ್ಷಿಸಿದಾಗ ನಗು ನಗುತ್ತಲೇ ಹೊರಬಂದ ಭೂಪ! ಮದ್ಯದ ಅಮಲಿನಲ್ಲಿ ನದಿಗೆ ಹಾರಿದ ಯುವಕನ ರಕ್ಷಣೆ](https://etvbharatimages.akamaized.net/etvbharat/prod-images/768-512-8830641-thumbnail-3x2-mng.jpg)
ಮದ್ಯದ ಅಮಲಿನಲ್ಲಿ ನದಿಗೆ ಹಾರಿದ ಯುವಕನ ರಕ್ಷಣೆ
ಸೆಪ್ಟೆಂಬರ್ 16ರಂದು, ಪುದುಪೆಟ್ಟೈ ಮೂಲದ ಯುವಕ ಕುಡಿದ ಮತ್ತಿನಲ್ಲಿ ಸೇತುವೆಯಿಂದ ಕೂವಂ ನದಿಗೆ ಹಾರಿದ್ದಾನೆ. ಘಟನೆಯ ಕುರಿತು ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿದ್ದಾರೆ.
ಮದ್ಯದ ಅಮಲಿನಲ್ಲಿ ನದಿಗೆ ಹಾರಿದ ಯುವಕನ ರಕ್ಷಣೆ
ಪೊಲೀಸರು ಆಗಮಿಸುವ ವೇಳೆಗಾಗಲೇ ಆತ ಸುಮಾರು 1 ಕಿ.ಮೀ ದೂರ ನೀರಿನಲ್ಲಿ ಈಜುತ್ತಾ ಸಾಗಿದ್ದಾನೆ. ಸದ್ಯ ಆತನನ್ನು ರಕ್ಷಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.